ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಭ್ಯ ಔಷಧಿಗಳಿಂದ ಚಿಕಿತ್ಸೆ

Last Updated 16 ಜೂನ್ 2020, 19:30 IST
ಅಕ್ಷರ ಗಾತ್ರ

ಹೆಚ್ಚು ರೋಗಿಗಳು ಕೋವಿಡ್-19 ರೋಗದಿಂದ ಗುಣಮುಖರಾಗುತ್ತಿರುವುದರಿಂದ ಅವರಿಗೆ ಯಾವ ಔಷಧಿಗಳನ್ನು ಸರ್ಕಾರ ನೀಡುತ್ತಿದೆ ಎಂದುರವಿಕಿರಣ್ ರೈ ಎನ್ನುವವರು ಕೇಳಿದ್ದಾರೆ (ವಾ.ವಾ., ಜೂನ್‌ 12). ಸದ್ಯಕ್ಕೆ ಕೋವಿಡ್‌ ರೋಗ ತಡೆಗಟ್ಟಲು ಪ್ರತ್ಯೇಕವಾದ ಯಾವ ಔಷಧಿಯೂ ಲಭ್ಯವಿಲ್ಲದ್ದರಿಂದ ಈ ರೋಗದ ಲಕ್ಷಣಗಳನ್ನಾಧರಿಸಿ, ಲಭ್ಯವಿರುವ ಕೆಲವು ಔಷಧಿಗಳನ್ನು ತುರ್ತು ಸಂದರ್ಭಗಳಲ್ಲಿ ಬಳಸಲು ಭಾರತದ ಔಷಧ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ. ಹಾಗೆಯೇ ಅಮೆರಿಕ ಮತ್ತು ಕೋವಿಡ್– 19 ಮೊದಲು ಕಾಣಿಸಿಕೊಂಡ ಚೀನಾದಲ್ಲೂ ಅಲ್ಲಿನ ಸರ್ಕಾರಗಳು ಹಾಗೂ ಔಷಧ ನಿಯಂತ್ರಣ ಸಂಸ್ಥೆಗಳು ಇಂತಹುದೇ ಕ್ರಮ ಕೈಗೊಂಡಿವೆ. ಜೊತೆಗೆ ತಜ್ಞ ವೈದ್ಯರು ಮತ್ತು ಕೋವಿಡ್ ರೋಗಲಕ್ಷಣ ಹೊಂದಿರುವವರನ್ನು ಉಪಚರಿಸುತ್ತಿರುವ ವೈದ್ಯರ ಸಲಹೆ ಮೇರೆಗೆ ಕೂಡ ಮಾನದಂಡಗಳನ್ನು ಅನುಸರಿಸಿ ಕೆಲ ಔಷಧಿಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ.

ಈಗಾಗಲೇ ಬಳಕೆಯಲ್ಲಿರುವ ಇಂತಹ ಔಷಧಿಗಳನ್ನು ಈ ರೋಗಕ್ಕೆ ಪರಿಣಾಮಕಾರಿಯಾಗಿ ಬಳಸಲು ಸಾಧ್ಯವೇ ಎಂಬ ನಿಟ್ಟಿನಲ್ಲಿಯೂ ಸಂಶೋಧನೆ ನಡೆಯುತ್ತಿದೆ. ಜೊತೆಗೆ ಕೋವಿಡ್‌ ರೋಗ ಬಂದರೆ ಗುಣಮುಖರಾಗುವ ಸಾಧ್ಯತೆ ಅಧಿಕ. ಆದರೆ ಇದು ತೀರಾ ಬೇಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವಾಗಿರುವುದರಿಂದ ಸಾಕಷ್ಟು ತೊಂದರೆಯಾಗಿದೆ.

ವಸಂತ ರಾಜು ಎನ್.,ತಲಕಾಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT