ಗುರುವಾರ , ಅಕ್ಟೋಬರ್ 22, 2020
24 °C

ಅಪರೂಪದ ವ್ಯಕ್ತಿಗೆ ಅಪರೂಪದ ಗೌರವ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಅನಾಥ ಶವಗಳಿಗೆ ಮುಕ್ತಿ ದೊರಕಿಸುವ ಮೈಸೂರಿನ ಆಯೂಬ್ ಅಹ್ಮದ್ ಅವರನ್ನು ಈ ಬಾರಿಯ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಸನ್ಮಾನಿಸಲು ನಿರ್ಧರಿಸಿರುವುದು (ಪ್ರ.ವಾ., ಅ. 11) ವಿಶೇಷ
ಸುದ್ದಿ ಅನ್ನಿಸಿತು. ನಿಜಕ್ಕೂ ಈ ವ್ಯಕ್ತಿ ಮಾಡುತ್ತಿರುವ ಕಾರ್ಯಕ್ಕೆ ಎಂತಹ ಅತ್ಯುನ್ನತ ಪ್ರಶಸ್ತಿ ನೀಡಿ ಸನ್ಮಾನಿಸಿದರೂ ಕಡಿಮೆಯೇ. ದಿಕ್ಕಿಲ್ಲದ ಶವಗಳಿಗೆ, ಕೊರೊನಾದಿಂದ ಮೃತಪಟ್ಟ, ಸಂಬಂಧಿಕರೂ ಮುಟ್ಟದ ನೂರಕ್ಕೂ ಹೆಚ್ಚು ದೇಹಗಳಿಗೆ ಮುಕ್ತಿ ಮಾರ್ಗ ಕಾಣಿಸಲು ಜಿಲ್ಲಾಡಳಿತಕ್ಕೆ ನೆರವಾಗಿರುವ ಇಂತಹ ಅಪರೂಪದ ವ್ಯಕ್ತಿಯನ್ನು ಅಪರೂಪದ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸುವ ಸರ್ಕಾರದ ಮಾನವೀಯ ನಡೆ ಶ್ಲಾಘನೀಯ. 

- ಆರ್.ಟಿ.ವೆಂಕಟೇಶ್ ಬಾಬು, ತುಮಕೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.