ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ಮಳಿಗೆ: ಇರಲಿ ಎಚ್ಚರ

Last Updated 16 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ದೀಪಾವಳಿ ಸಮೀಪಿಸುತ್ತಿದೆ. ಕೊರೊನಾ ಹಾವಳಿಯ ಮಧ್ಯೆಯೂ ಪಟಾಕಿ ವ್ಯಾಪಾರ ಎಗ್ಗಿಲ್ಲದೆ ನಡೆಯಲಿದೆ. ಬೆಂಗಳೂರಿನ ಜನ ನೆರೆಯ ಹೊಸೂರಿಗೆ ಎಂದಿನಂತೆ ಪಟಾಕಿ ಖರೀದಿಸಲು ಲಗ್ಗೆ ಇಡಲಿದ್ದಾರೆ. ಅತ್ತಿಬೆಲೆ ಟೋಲ್ಗೇಟಿನ ಎರಡೂ ಕಡೆ ಸೇರಿ ಮೂರು ಸಾವಿರಕ್ಕಿಂತಲೂ ಹೆಚ್ಚಿನ ಕಾರು ಮತ್ತು ಇತರ ವಾಹನಗಳು ನಿಂತಲ್ಲೇ ನಿಲ್ಲಲಿವೆ.

ಹೊಸೂರಿಗೆ ಹೋಗುತ್ತಾ ಟೋಲ್ ಆದ ತಕ್ಷಣ ರಸ್ತೆಯ ಎಡ ಮಗ್ಗುಲಲ್ಲಿ ನೂರಾರು ಪಟಾಕಿ ಅಂಗಡಿಗಳು ರಸ್ತೆಯ ಬದಿಯಲ್ಲೇ ತಲೆಯೆತ್ತುತ್ತವೆ. ಇಲ್ಲಿ 250ರಿಂದ 300 ಚದರ ಮೀಟರ್ ಪ್ರದೇಶದಲ್ಲಿ ಸುಮಾರು 450ರಿಂದ 500 ಟ್ರಕ್ ಲೋಡಿನಷ್ಟು ಪಟಾಕಿಗಳು ತುಂಬಿರುತ್ತವೆ. ಒಂದು ವೇಳೆ ಏನಾದರೂ ಸಣ್ಣ ಪ್ರಮಾಣದ ಅವಘಡ ನಡೆದರೂ ಅಲ್ಲಿ ಸೇರಿದ ಸಾವಿರಾರು ಜನ, ವಾಹನಗಳು, ಸುತ್ತಮುತ್ತಲಿನ ನೂರಾರು ಮನೆಗಳಿಗೆ ಅಪಾಯ ತಪ್ಪಿದ್ದಲ್ಲ.

ಅತ್ತಿಬೆಲೆ ಪೊಲೀಸ್ ಠಾಣೆಯೂ ಅಲ್ಲಿಂದ ಕೂಗಳತೆಯ ದೂರದಲ್ಲಿದೆ. ಕೊನೆಗೆ ಪೊಲೀಸರೂ ಅಪಾಯದಿಂದ ಪಾರಾಗುವ ಅವಕಾಶ ಕಡಿಮೆ. ಸಂಬಂಧಿಸಿದ ಇಲಾಖೆಗಳು ತಕ್ಷಣ ಎಚ್ಚೆತ್ತು ಎಲ್ಲ ಸುರಕ್ಷಾ ಕ್ರಮಗಳನ್ನು ಖಾತರಿಪಡಿಸಿಕೊಳ್ಳಬೇಕು.

- ಜಯಪಾಲ ಚಂದಾಡಿ, ಅತ್ತಿಬೆಲೆ, ಆನೇಕಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT