ಗುರುವಾರ , ಜನವರಿ 21, 2021
27 °C

ಮೂಲ ವಿಜ್ಞಾನಕ್ಕೆ ಸಿಗಲಿ ಪ್ರಾಶಸ್ತ್ಯ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಎಂಜಿನಿಯರಿಂಗ್ ಪದವೀಧರರನ್ನು ಶಾಲೆಗಳಲ್ಲಿ ವಿಜ್ಞಾನ ಹಾಗೂ ಗಣಿತ ಬೋಧಿಸಲು ನೇಮಿಸುವ ನಿರ್ಧಾರದ ಬಗ್ಗೆ ಸರ್ಕಾರ ಮತ್ತೊಮ್ಮೆ ಚಿಂತಿಸಬೇಕಾಗಿದೆ. ಬಿ.ಎಸ್ಸಿ ಪದವಿಗೆ ಬೇಡಿಕೆ ಕುಸಿದು ಅಲ್ಲಿಂದ ಹೊರಬರುತ್ತಿರುವ ಪದವೀಧರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ದಶಕಗಳಿಂದ ನಡೆಯುತ್ತಿರುವ ಬೆಳವಣಿಗೆ. ಶಿಕ್ಷಣತಜ್ಞ ದಿವಂಗತ ಎಚ್.ನರಸಿಂಹಯ್ಯನವರು ಈ ವಿಷಯವನ್ನು ವಿಧಾನಪರಿಷತ್‍ನಲ್ಲಿ ಭಾವುಕರಾಗಿ ಪ್ರಸ್ತಾಪಿಸಿದ್ದರು. ಬಿ.ಎಸ್ಸಿ ಪದವೀಧರರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯುವಂತಾಗಬೇಕು, ಕಾಲೇಜುಗಳಲ್ಲಿನ ವಿಜ್ಞಾನ ಬೋಧಕರು ಇನ್ನಷ್ಟು ಪ್ರಬುದ್ಧರಾಗಬೇಕಾಗಿದೆ.

ಒಮ್ಮೆ ಎಂಜಿನಿಯರ್‌ಗಳು ಪ್ರಾಥಮಿಕ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದರೆ ಹಾಲಿ ಇರುವ ಶಿಕ್ಷಕರಲ್ಲಿ ಕೀಳರಿಮೆ ಉಂಟಾಗಬಹುದು. ಇರುವ ಶಿಕ್ಷಕರಿಗೆ ಶಿಸ್ತುಬದ್ಧ ಪ್ರಶಿಕ್ಷಣ ಹಾಗೂ ಅನರ್ಹ, ಅನಾಸಕ್ತ ಶಿಕ್ಷಕರಿಗೆ ಸ್ವಯಂ ನಿವೃತ್ತಿ, ಕಾಲೇಜು ಕಟ್ಟಡ, ಪ್ರಯೋಗಾಲಯಗಳಿಗೆ ಹೊಸತನದ ಸ್ಪರ್ಶ, ಪೋಷಕರಿಗೆ ತಿಳಿವಳಿಕೆಯಂತಹ ಕ್ರಮಗಳು ಅತ್ಯಗತ್ಯ. ಇದರಲ್ಲಿ ಶಿಕ್ಷಣಾಸಕ್ತ ಸಂಘ ಸಂಸ್ಥೆಗಳ ಪಾತ್ರವೂ ಇದೆ. ಹೀಗಾಗಿ ಈ ನಿರ್ಧಾರದ ಸಾಧಕ– ಬಾಧಕಗಳ ಬಗ್ಗೆ ಇನ್ನಷ್ಟು ಚರ್ಚೆ ಅವಶ್ಯಕ.

- ಟಿ.ಪಿ.ಸುಭಾಷಿಣಿ, ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.