ಮಂಗಳವಾರ, ಅಕ್ಟೋಬರ್ 19, 2021
23 °C

ಪಕ್ಷ ಪ್ರತಿಷ್ಠೆಯ ಅತಿರೇಕ ಸಲ್ಲದು

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಶಾಲಾ ಪಠ್ಯಪುಸ್ತಕದಲ್ಲಿನ ದೋಷಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹಿಂಸೆಯನ್ನು ಪ್ರಚೋದಿಸುವಂತಹ ಹೇಳಿಕೆ ನೀಡಿರುವುದು (ಪ್ರ.ವಾ., ಅ. 9) ಖಂಡನಾರ್ಹ. ಇಷ್ಟು ದಿನಗಳವರೆಗೆ ಕಾಣಿಸದೇ ಇರುವ ದೋಷಗಳು ಸಚಿವರಾಗಿ ಕೇವಲ ಒಂದು ತಿಂಗಳಲ್ಲಿ ಕಾಣಿಸಿದ್ದು ಪಕ್ಷನಿಷ್ಠೆಯ ಅತಿರೇಕವೆನಿಸುತ್ತದೆ. ಪಠ್ಯ ರಚನೆಯಲ್ಲಿ ದೋಷಗಳಿರುವುದು ಸಹಜ. ಅವುಗಳನ್ನು ಸರಿಪಡಿಸಲು ಹೊಸ ಪಠ್ಯಪುಸ್ತಕಗಳು ಬರುವವರೆಗೆ ಕಾಯಬೇಕಾಗಿತ್ತು.

ಜೊತೆಗೆ, ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು ಸಚಿವರ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರೆ ಸಾಕಾಗಿತ್ತು. ಆದರೆ ಸಚಿವರು ತಮ್ಮ ಮಾತನ್ನು ಹಿಂಪಡೆಯುವಂತೆ ಆಗ್ರಹಿಸಿದುದನ್ನು ವಿವಿಧ ಸಾಮಾಜಿಕ ಸಂಘಟನೆಗಳು ಹಾಗೂ ವಿಚಾರವಾದಿಗಳು ಬೆಂಬಲಿಸಿ, ಬರಗೂರರು ಪ್ರಶ್ನಾತೀತರು ಎಂಬಂತೆ ಬಿಂಬಿಸುವುದು
ಅತಿರೇಕವೆನಿಸುತ್ತದೆ.

- ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.