ಮಂಗಳವಾರ, ಮಾರ್ಚ್ 21, 2023
28 °C

ತೆರಿಗೆ ದಾಳಿಗೆ ನಾನಾ ಮುಖ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ರಾಜಕಾರಣಿಗಳು ಮತ್ತು ಅವರೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳ ವಿರುದ್ಧ ನಡೆಯುವ ತೆರಿಗೆ ದಾಳಿಗಳ ಹಿಂದೆ ಕಾನೂನಿನ ಅನ್ವಯದ ಸಿದ್ಧತೆಗಳಿರುತ್ತವೆಯಾದ್ದರಿಂದ ಅವನ್ನು ರಾಜಕೀಯ ಪ್ರೇರಿತ ಎನ್ನುವುದು ಸರಿಯಲ್ಲ ಎಂಬ ಸಾಮಗ ದತ್ತಾತ್ರಿ ಅವರ ವಾದ (ಪ್ರ.ವಾ., ಅ. 13) ಸರಿಯಾದುದೇ. ಆದರೆ, ಅದು ವಾಸ್ತವದ ಒಂದು ಮುಖ ಮಾತ್ರ. ಇಂಥ ದಾಳಿಗಳಲ್ಲಿ ಇರುವ ರಾಜಕೀಯ, ಯಾರ ಯಾರ ಮೇಲೆ ದಾಳಿ ನಡೆದಿದೆ ಎಂಬುದರಲ್ಲಲ್ಲ. ಯಾರ ಯಾರ ಮೇಲೆ ದಾಳಿ ಯಾವಾಗ ನಡೆಯುತ್ತದೆ ಅಥವಾ ನಡೆದಿಲ್ಲ ಅಥವಾ ಯಾಕೆ ನಡೆಯುತ್ತಿಲ್ಲ ಎಂಬುದರಲ್ಲಿ.

ಕಾನೂನಿನ ಅನುಷ್ಠಾನದಲ್ಲಿ ಕಮಿಷನ್ ಮತ್ತು ಒಮಿಷನ್ ಎಂಬ ಎರಡು ಅಂಗಗಳಿವೆ. ಕಮಿಷನ್ ನ್ಯಾಯಬದ್ಧವಾಗೇ ಇರುವುದು ಎಲ್ಲರಿಗೂ ಕಾಣಿಸುತ್ತದೆ. ಆದರೆ ಒಮಿಷನ್ ನ್ಯಾಯಬದ್ಧವಾಗಿ ಇಲ್ಲದಿದ್ದಾಗ ಅದು ಹಾಗೆ ಕಾಣಿಸುವುದಿಲ್ಲ, ಅಷ್ಟೆ. ರಾಜಕೀಯಪ್ರೇರಿತ ಎನ್ನುವುದು ಇದನ್ನೇ. ಈ ಸಂದರ್ಭದಲ್ಲಿ ಸರ್ವಜ್ಞನ ವಚನವೊಂದು ನೆನಪಾಗುತ್ತದೆ: ಧನಕನಕ ಉಳ್ಳನಕ ದಿನಕರನಂತಿಕ್ಕು/ ಧನಕನಕ ಹೋದ ಮರುದಿನ– ಹಾಳೂರ/ ಶುನಕನಂತಕ್ಕು ಸರ್ವಜ್ಞ. ಇಲ್ಲಿ ಬೇಕಿದ್ದರೆ ಧನಕನಕದ ಸ್ಥಾನದಲ್ಲಿ ಅಧಿಕಾರ ಎಂಬ ಪದವನ್ನು ಸೇರಿಸಿಕೊಂಡು ಓದಿಕೊಳ್ಳಬಹುದು.

- ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.