ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮರಾಜ್ಯದ ಆದರ್ಶ ಮಾದರಿಯಾಗಲಿ

Last Updated 7 ನವೆಂಬರ್ 2019, 16:36 IST
ಅಕ್ಷರ ಗಾತ್ರ

ಅಯೋಧ್ಯೆಯ ರಾಮಜನ್ಮಭೂಮಿ– ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ ತೀರ್ಪಿನ ಕುರಿತಂತೆ ದೇಶವಾಸಿಗಳಲ್ಲಿ ಕುತೂಹಲ ಮನೆಮಾಡಿದೆ. ವಾಲ್ಮೀಕಿ ರಾಮಾಯಣದಲ್ಲಿ ರಾಮನು ಭರತನಿಗೆ ರಾಜನ 14 ದೋಷಗಳ ಕುರಿತು ವಿವರಿಸುತ್ತಾನಂತೆ. ಪ್ರಜೆಗಳ ಕಣ್ಣೀರು ರಾಜನ ಸಂತತಿಯನ್ನು, ದೇಶದ ಸಂಪತ್ತನ್ನು ನಾಶ ಮಾಡುತ್ತದೆ ಎಂಬುದು ಅದರಲ್ಲಿ ಪ್ರಮುಖವಾದ ಅಂಶ.

1992ರಲ್ಲಿ ನಡೆದ ಅಯೋಧ್ಯೆ ಹತ್ಯಾಕಾಂಡ ಭೀಕರವಾದದ್ದು. ಅದು ಅಮಾಯಕ ಜನರನ್ನು ಸಾವು ನೋವಿಗೆ ದೂಡಿತು. ಅನಾದಿ ಕಾಲದಿಂದಲೂ ಭಾರತ ದೇಶವು ಸಕಲಧರ್ಮ ಸೌಹಾರ್ದವನ್ನು ಒಳಗೊಂಡಿದೆ. ರಾಜಕೀಯ ಪಕ್ಷಗಳು ಹುಟ್ಟುವ ಮೊದಲಿನಿಂದಲೇ ಕೋಮು ಸೌಹಾರ್ದದ ಭಾವನೆಯು ಜನರ ಮನಸ್ಸಿನಲ್ಲಿ ಅಂತರ್ಗತವಾಗಿದೆ. ಫಟಿಂಗ ರಾಜಕಾರಣಿಗಳು ಅಯೋಧ್ಯೆಯ ತೀರ್ಪನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಜೊತೆಗೆ, ನೆಟ್ಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಡುವ ಹೇಳಿಕೆಗಳೂ ಪ್ರಚೋದನಕಾರಿ ಆಗಿರುವ ಸಾಧ್ಯತೆ ಇರುತ್ತದೆ. ಜನರು ಇದರಿಂದೆಲ್ಲ ತಮ್ಮ ಭಾವನೆಯು ಉದ್ದೀಪನಗೊಳ್ಳದಂತೆ ಎಚ್ಚರ ವಹಿಸಬೇಕು. ತೀರ್ಪಿನ ಪರ– ವಿರೋಧದ ಏಕಪಕ್ಷೀಯ ಪ್ರಚಾರಕ್ಕೆ ಅವಕಾಶ ನೀಡದೆ ರಾಮರಾಜ್ಯದ ಆದರ್ಶ ಪಾಲನೆ ಮಾದರಿಯಾಗಬೇಕು.

-ಆರ್.ವೆಂಕಟರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT