ಸುರಕ್ಷತೆ, ಘನತೆ, ಮಮತೆಯ ನಿರ್ಣಯ

ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ರಾಜ್ಯ ಸರ್ಕಾರವು ಪ್ರತ್ಯೇಕ ಮಂಡಳಿ ಸ್ಥಾಪಿಸಲು ತೆಗೆದುಕೊಂಡಿರುವ ನಿರ್ಣಯವು ಬರೀ ಆಡಳಿತಾತ್ಮಕ ಬದಲಾವಣೆಯಲ್ಲ; ಇದು ದಶಕಗಳ ನೋವು ಮತ್ತು ಅವಮಾನಗಳನ್ನು ಅನುಭವಿಸಿದ ಸಮುದಾಯಕ್ಕೆ ದೊರೆತ ಗೌರವದ ಸಂಕೇತ. ಸಮಾಜದ ಮುಖ್ಯವಾಹಿನಿಯಿಂದ ದೂರ ತಳ್ಳಲಾದ ಸಾವಿರಾರು ಜೀವಗಳಿಗೆ ಉದ್ದೇಶಿತ ಮಂಡಳಿಯು ಆಶಾಕಿರಣವಾಗಿದೆ. ಸರ್ಕಾರದ ನಿರ್ಧಾರವು ಅವರ ಬದುಕಿನಲ್ಲಿ ಸಮಾನತೆ, ಸುರಕ್ಷತೆ ಮತ್ತು ಘನತೆಯನ್ನು ತರಲಿ; ಪ್ರೀತಿ ಮತ್ತು ಒಳಗೊಳ್ಳುವಿಕೆಯ ಹೊಸ ಯುಗಕ್ಕೆ ನಾಂದಿಯಾಗಲಿ.

– ಬಸವಚೇತನ ಎಂ.ಎಚ್., ಬೀದರ್

ಸರ್ಕಾರಿ ಬಸ್ ಜಾಹೀರಾತು ಗೋಡೆಯೆ?

ಕರ್ನಾಟಕದ ಸರ್ಕಾರಿ ಬಸ್ಗಳು ಜನರನ್ನು ಸಾಗಿಸುವ ವಾಹನಗಳಾಗುವ ಬದಲು, ಜಾಹೀರಾತು ಫಲಕಗಳಾಗಿ ಪರಿವರ್ತನೆಯಾಗುತ್ತಿವೆ. ಬಸ್ಗಳ ಮೇಲೆ ಅಂಟಿಸಿರುವ ಜಾಹೀರಾತುಗಳಲ್ಲಿ ಹುದುಗಿದ ಮಾರ್ಗ ಸಂಖ್ಯೆ, ಊರುಗಳ ಹೆಸರು ಮತ್ತಿತರೆ ಮಾಹಿತಿ ಹುಡುಕುವಂತಾಗಿದೆ. ಹಿರಿಯ ನಾಗರಿಕರು ಮತ್ತು ಗ್ರಾಮೀಣ ಪ್ರಯಾಣಿಕರು ಸರಿಯಾದ ಬಸ್ ಗುರುತಿಸಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸ್ ಕಿಟಕಿ, ಮುಂಭಾಗದ ಬೋರ್ಡ್, ಸೂಚನಾ ಫಲಕಗಳ ಮೇಲೂ ಫ್ಲೆಕ್ಸ್ ಹಾಗೂ ಸ್ಟಿಕ್ಕರ್ಗಳನ್ನು ಅಂಟಿಸಲಾಗುತ್ತಿದೆ. ಸಾರಿಗೆ ಇಲಾಖೆ ಆದಾಯದ ಹೆಸರಿನಲ್ಲಿ ಜನರ ಸುಖ, ಸುರಕ್ಷತೆ ಮತ್ತು ಗೌರವವನ್ನು ಮರೆತಂತೆ ವರ್ತಿಸುತ್ತಿರುವುದು ವಿಷಾದನೀಯ. ಬಸ್ ಜಾಹೀರಾತಿನ ಗೋಡೆ ಅಲ್ಲ– ಅದು ಜನರ ಜೀವನಾಡಿ. ಬಸ್ಗಳ ಮೇಲಿನ ಜಾಹೀರಾತುಗಳಿಗೆ ಮಿತಿ ಅಗತ್ಯ.

– ಹನುಮಂತ ಆರ್.ಸಿ., ಹುನಗುಂದ

ಶಿಕ್ಷಕರಿಗೆ ನೋಟಿಸ್: ಅವರ ತಪ್ಪೇನಿದೆ?

ಬೆಂಗಳೂರಿನ ಸರ್ಕಾರಿ ಪ್ರೌಢಶಾಲೆಯೊಂದರ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ, ಶಾಲಾ ಶಿಕ್ಷಣ ಇಲಾಖೆಯು ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರಿಗೆ ನೋಟಿಸ್ ನೀಡಿದೆ (ಪ್ರ.ವಾ., ಜ. 25). ಇದು ಸರಿಯಲ್ಲ. ಕೆಲವು ಮಕ್ಕಳು ಸಹಜವಾಗಿ ದಪ್ಪ ಇರುತ್ತಾರೆ. ಅಂತಹ ಮಕ್ಕಳ ದೇಹಪ್ರಕೃತಿಯಲ್ಲಿನ ವ್ಯತ್ಯಾಸ ಗೊತ್ತಾಗದು. ಹಾಗಾಗಿ, ದೈಹಿಕ ಬದಲಾವಣೆಗಳನ್ನು ಗುರುತಿಸಲು ವಿಫಲರಾಗಿರುವರೆಂಬ ಕಾರಣಕ್ಕೆ ಶಿಕ್ಷಕರನ್ನು ಹೊಣೆ ಮಾಡುವುದು ವಿವೇಚನಾರಹಿತ ತೀರ್ಮಾನವಾಗಿದೆ. ಇಂಥ ಘಟನೆ ವಸತಿ ಶಾಲೆಯಲ್ಲಿ ಸಂಭವಿಸಿದ್ದರೆ ಸಿಬ್ಬಂದಿಯ ಹೊಣೆಗಾರಿಕೆಯಿರುತ್ತದೆ. ಆದರೆ ಪ್ರಕರಣ ನಡೆದಿರುವುದು ವಸತಿರಹಿತ ಶಾಲೆಯಲ್ಲಿ. ಇಂಥ ಪ್ರಕರಣಗಳು ಮರುಕಳಿಸುತ್ತಿರುವುದರಿಂದ, ತಾಯಂದಿರು ನಿಗಾ ಇಡಬೇಕಾದ ಅವಶ್ಯಕತೆ ಕುರಿತು ಆರೋಗ್ಯ ಇಲಾಖೆಯು ವ್ಯಾಪಕ ಜಾಗೃತಿ ಮೂಡಿಸಬೇಕು. ಶಾಲೆಗಳಿಗೆ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಭೇಟಿ ನೀಡಿ ಅರಿವು ಮೂಡಿಸಬೇಕು.

– ಪುಟ್ಟದಾಸು, ಮಂಡ್ಯ

ಜನರ ಮೌನ ಸರ್ಕಾರಕ್ಕೆ ಬಂಡವಾಳವಲ್ಲ

ಬಳ್ಳಾರಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ಅಪಾಯಕಾರಿ ಮಟ್ಟ ತಲಪಿದೆ. ಈ ಮಾಲಿನ್ಯಕ್ಕೆ ಸರ್ಕಾರದ ಹೊಣೆಗೇಡಿತನವೇ ಕಾರಣ. ಗಣಿಗಾರಿಕೆ, ಬೃಹತ್ ಕೈಗಾರಿಕೆಗಳಿಂದ ಬರುವ ಕೋಟ್ಯಂತರ ರೂಪಾಯಿ ಹಣವು ಪರಿಸರ ನಿಯಮಗಳಿಗಿಂತ ಸರ್ಕಾರಕ್ಕೆ ಮುಖ್ಯವಾಗಿ ಕಾಣುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ‘ನೋಟಿಸ್’ ನೀಡುವ ಸಂಸ್ಥೆಯಾಗಿ ಉಳಿದಿದೆಯೇ ಹೊರತು, ಬದಲಾವಣೆ ತರುವ ಶಕ್ತಿಯಾಗಿ ಉಳಿದಿಲ್ಲ. ಅಭಿವೃದ್ಧಿ ಎಂದರೆ ಬರೀ ಕಾರ್ಖಾನೆಗಳ ಸ್ಥಾಪನೆಯಲ್ಲ, ಜನರ ಬದುಕುವ ಹಕ್ಕನ್ನು ಕಾಪಾಡುವುದೂ ಹೌದು. ಗಣಿಗಾರಿಕೆ ಪ್ರದೇಶಗಳಲ್ಲಿ ಕಡ್ಡಾಯವಾಗಿ ಹಸುರು ವಲಯ ನಿರ್ಮಾಣ, ರಸ್ತೆಗಳ ಸುಧಾರಣೆ ಮತ್ತು ಕಾರ್ಖಾನೆಗಳಿಗೆ ಆಧುನಿಕ ಫಿಲ್ಟರ್ಗಳನ್ನು ಅಳವಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು. ಜನರ ಮೌನ ಸರ್ಕಾರಕ್ಕೆ ಬಂಡವಾಳ ಆಗಬಾರದು.

– ಭೂಮಿಕಾ ವಿ., ಕೋಲಾರ

ಅಂಗವಿಕಲರ ಬಸ್ ಪಾಸ್ಗೆ ‘ಶಕ್ತಿ’ ಬೇಕು!

ಪ್ರಸ್ತುತ ಜಾರಿಯಲ್ಲಿರುವ ಅಂಗವಿಕಲರ ರಿಯಾಯಿತಿ ಬಸ್ ಪಾಸ್ 100 ಕಿ.ಮೀ. ಒಳಗಿನ ಪ್ರಯಾಣದ ವ್ಯಾಪ್ತಿಯನ್ನು ಒಳಗೊಂಡಿದೆ. ಈ ನಿಯಮ ಬದಲಾವಣೆ ಮಾಡಿ, ರಾಜ್ಯದಾದ್ಯಂತ ರಿಯಾಯಿತಿ ಪಾಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸರ್ಕಾರವನ್ನು ಕೋರುವೆ. ಸರ್ಕಾರದ ‘ಶಕ್ತಿ’ ಯೋಜನೆ ಮಹಿಳಾ ಸಬಲೀಕರಣಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಅದೇ ರೀತಿಯಾಗಿ ಅಂಗವಿಕಲರ ಸಬಲೀಕರಣಕ್ಕಾಗಿಯೂ ಸರ್ಕಾರ ‘ಶಕ್ತಿ’ ಯೋಜನೆ ತಂದರೆ, ರಾಜ್ಯದಲ್ಲಿರುವ 35 ಲಕ್ಷಕ್ಕೂ ಹೆಚ್ಚು ಅಂಗವಿಕಲರಿಗೆ ಅನುಕೂಲ ಆಗುವುದು.

– ಶಿವನಗೌಡ ಪೊಲೀಸ್ ಪಾಟೀಲ್, ಕೊಪ್ಪಳ

ರೋಗಗ್ರಸ್ತ ತ್ಯಾಜ್ಯ ನಿರ್ವಹಣೆ ಘಟಕ

ನಗರ, ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಸ್ಥಾಪಿಸಲಾದ ಅನೇಕ ಘಟಕಗಳು ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುತ್ತಿವೆ. ಕೆಲವು ಘಟಕಗಳಲ್ಲಿ ಯಂತ್ರಗಳನ್ನು ಅಳವಡಿಸಿ ವರ್ಷಗಳೇ ಕಳೆದಿದ್ದರೂ, ಅಗತ್ಯ ನಿರ್ವಹಣೆ, ತಾಂತ್ರಿಕ ಸಹಾಯ ಮತ್ತು ವಿದ್ಯುತ್ ಪೂರೈಕೆ ಸಮರ್ಪಕವಾಗಿ ಲಭ್ಯವಾಗಿಲ್ಲ. ತ್ಯಾಜ್ಯ ಸಂಗ್ರಹವಾದರೂ ಸಂಸ್ಕರಿಸಲು ಸಾಧ್ಯವಾಗದೆ ಸುತ್ತಮುತ್ತ ದುರ್ವಾಸನೆ, ಆರೋಗ್ಯ ಸಮಸ್ಯೆಗಳು ಮತ್ತು ಪರಿಸರ ಮಾಲಿನ್ಯ ಹೆಚ್ಚುತ್ತಿದೆ.

ಸ್ಥಳೀಯ ಆಡಳಿತ ಸಂಸ್ಥೆಗಳ ನಿರ್ಲಕ್ಷ್ಯ, ಸಿಬ್ಬಂದಿಯ ಕೊರತೆ ಮತ್ತು ಯೋಜನೆಗಳ ಮೇಲ್ವಿಚಾರಣೆಯ ಅಭಾವ ಈ ದುಃಸ್ಥಿತಿಗೆ ಕಾರಣವಾಗಿದೆ. ತ್ಯಾಜ್ಯ ಘಟಕಗಳು ಉದ್ದೇಶಿತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಯಂತ್ರಗಳ ನಿಯಮಿತ ನಿರ್ವಹಣೆ, ಸಿಬ್ಬಂದಿಗೆ ತರಬೇತಿ ಹಾಗೂ ಸ್ಪಷ್ಟ ಜವಾಬ್ದಾರಿ ವ್ಯವಸ್ಥೆ ಅಗತ್ಯವಾಗಿದೆ. ಇಲ್ಲದಿದ್ದರೆ ತ್ಯಾಜ್ಯ ಘಟಕಗಳು ಅಭಿವೃದ್ಧಿಯ ಸಂಕೇತವಾಗದೆ, ನಿರ್ಲಕ್ಷ್ಯದ ಪ್ರತೀಕವಾಗುತ್ತವೆ.

– ಎನ್. ಮಹಾರಾಜ, ಹೊಸಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.