ಕೆಇಎ ಸಹಾಯವಾಣಿಯ ಅಸಹಾಯಕತೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿವಿಧ ವೃತ್ತಿಪರ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸುವ ಸಿಇಟಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳ ಸಹಾಯಕ್ಕಾಗಿ ‘08023460460’ ಸಹಾಯವಾಣಿ ತೆರೆದಿದೆ. ಆದರೆ, ಈ ಸಂಖ್ಯೆಗೆ ಕರೆ ಮಾಡಿದರೆ ಹತ್ತರಿಂದ ಹದಿನೈದು ನಿಮಿಷ ಕಾಯಬೇಕಾಗುತ್ತದೆ. ಇನ್ನೇನು ನಮ್ಮ ಸರದಿ ಬಂತು ಎನ್ನುವಷ್ಟರಲ್ಲಿ ಕರೆ ಕಡಿತಗೊಳ್ಳುತ್ತದೆ. ಎಷ್ಟು ಬಾರಿ ಪ್ರಯತ್ನಿಸಿದರೂ ಇದೇ ಪರಿಸ್ಥಿತಿ. ಇದು ಹೀಗೆಯೇ ಮುಂದುವರಿದರೆ ಅರ್ಜಿ ಸಲ್ಲಿಸುವ ಸಮಯದಲ್ಲಿ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳ ಸಹಾಯಕ್ಕೆ ಬರುವುದಾದರೂ ಯಾರು? ಪ್ರಾಧಿಕಾರವು ಈ ಸಮಸ್ಯೆ ಪರಿಹರಿಸದಿರುವುದು ಯಕ್ಷಪ್ರಶ್ನೆಯಾಗಿದೆ.

- ಮಂಜುನಾಥ ಸು.ಮ., ಚಿಂತಾಮಣಿ

‘ಸಂವಿಧಾನವೇ ಬೆಳಕು’ ಸ್ತುತ್ಯರ್ಹ ನಡೆ

ಸಂವಿಧಾನವು ಪ್ರಜಾಪ್ರಭುತ್ವದ ಆತ್ಮ ಹಾಗೂ ದೇಶದ ಸರ್ವಶ್ರೇಷ್ಠ ಗ್ರಂಥವಾಗಿದೆ. ಆದರೆ, ಸಮಸಮಾಜದ ಆಶಯದಡಿ ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿದೆ. ಕೆಲವು ಜನಪ್ರತಿನಿಧಿಗಳೇ ಸಂವಿಧಾನದ ಪರಾಮರ್ಶೆಯ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಅವರಿಗೆ ಅದರ ಆಶಯಗಳನ್ನು ಈಡೇರಿಸುವ ಮನಸ್ಸಿಲ್ಲ. ಇಂತಹ ಸಂಕ್ರಮಣ ಸ್ಥಿತಿಯಲ್ಲಿ ‘ಸಂವಿಧಾನವೇ ಬೆಳಕು’ ಕಾರ್ಯಕ್ರಮದ ಮೂಲಕ ಅದರ ಮೂಲತತ್ತ್ವಗಳ ಬಗ್ಗೆ ‘ಪ್ರಜಾವಾಣಿ’ ಮೂಡಿಸುತ್ತಿರುವ ಜಾಗೃತಿ ಸ್ತುತ್ಯರ್ಹ. ಸಂವಿಧಾನ ತಜ್ಞರು, ವಕೀಲರು, ನ್ಯಾಯಮೂರ್ತಿಗಳು, ಹಿರಿಯ ಅಧಿಕಾರಿಗಳು, ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಅಭಿನಂದನೀಯ.

- ದಡದಹಳ್ಳಿ ರಮೇಶ್, ಚಾಮರಾಜನಗರ

ಪಿಎಚ್.ಡಿ ನೈಜತೆ ಪತ್ತೆಗೆ ಸಮಿತಿ ರಚಿಸಿ

2025–26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಆಯ್ಕೆಯಾದ ಅತಿಥಿ ಉಪನ್ಯಾಸಕರು, ಪದವಿಯ ನೈಜತೆ ಪ್ರಮಾಣಪತ್ರ ಕೊಡಬೇಕೆಂದು ಆದೇಶಿಸಿರುವುದು ಸ್ವಾಗತಾರ್ಹ. ಇತ್ತೀಚೆಗೆ ಐದಾರು ಲಕ್ಷ ರೂಪಾಯಿ ಕೊಟ್ಟು ಹೊರರಾಜ್ಯಗಳಿಂದ ಪಿಎಚ್.ಡಿ ಪದವಿ ಪ್ರಮಾಣಪತ್ರ ಪಡೆಯುತ್ತಿರುವ ದಂಧೆ ಹೆಚ್ಚಿದೆ. ಈ ನಕಲಿ ಪಿಎಚ್.ಡಿ ಹಾವಳಿ ಅತಿಥಿ ಉಪನ್ಯಾಸಕರಿಗಷ್ಟೆ ಸೀಮಿತವಾಗಿಲ್ಲ. 2009ರಲ್ಲಿ ಪದವಿ ಕಾಲೇಜುಗಳಿಗೆ ನೇಮಕವಾಗಿರುವ ಕೆಲವು ಸಹಾಯಕ ಪ್ರಾಧ್ಯಾಪಕರು ಬಡ್ತಿ ಹಾಗೂ ಹೆಚ್ಚಿನ ಸಂಬಳದ ಆಸೆಗಾಗಿ ಕಳ್ಳಮಾರ್ಗದಲ್ಲಿ ನಕಲಿ ಡಾಕ್ಟರೇಟ್ ಪದವಿ ಪಡೆದಿರುವ ಶಂಕೆಯಿದೆ. ಅನುದಾನಿತ ಪದವಿ ಕಾಲೇಜುಗಳಲ್ಲೂ ಕೆಲವರು ನಕಲಿ ಪಿಎಚ್.ಡಿ ಪ್ರಮಾಣಪತ್ರ ಸಲ್ಲಿಸಿ ಹುದ್ದೆ ಗಿಟ್ಟಿಸಿಕೊಂಡಿರುವ ಸಾಧ್ಯತೆಯಿದೆ. ಹಾಗಾಗಿ, ಪಿಎಚ್.ಡಿ ಪ್ರಮಾಣಪತ್ರಗಳ ನೈಜತೆ ಪರಿಶೀಲನೆಗಾಗಿ ಉನ್ನತ ಶಿಕ್ಷಣ ಇಲಾಖೆಯು ಸಮಿತಿ ರಚಿಸಬೇಕಿದೆ. ಕಾನೂನು ಉಲ್ಲಂಘಿಸಿದವರನ್ನು ಕೆಲಸದಿಂದ ವಜಾಗೊಳಿಸಬೇಕಿದೆ.

- ಹೊನ್ನಪ್ಪ ಹೊನ್ನಪ್ಪನವರ, ಹಾವೇರಿ

ಶಿಕ್ಷಕರ ನೇಮಕಾತಿಗೆ ಸರ್ಕಾರದ ಅಸಡ್ಡೆ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ನೀಗಿಸಲು ಹೊಸದಾಗಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳ ಲಾಗುವುದು ಎಂದು ಕಳೆದ ವರ್ಷವೇ ಶಿಕ್ಷಣ ಸಚಿವರು ಪ್ರಕಟಿಸಿದ್ದರು. ಅದರಂತೆ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನೂ ನಡೆಸಲಾಗಿದೆ. ಆದರೆ, ನೇಮಕಾತಿ ಮಾತ್ರ ನನೆಗುದಿಗೆ ಬಿದ್ದಿದೆ. ಕೆಪಿಎಸ್ ಶಾಲೆಗಳನ್ನು ತೆರೆಯುವ ಉತ್ಸಾಹದಲ್ಲಿರುವ ಸರ್ಕಾರಕ್ಕೆ ಶಿಕ್ಷಕರ ಕೊರತೆ ಬಗ್ಗೆ ಗಮನವಿಲ್ಲ. ಬೋಧಕರೇ ಇಲ್ಲದಿದ್ದರೆ ಸರ್ಕಾರಿ ಶಾಲೆಗಳು ಉಳಿಯುವುದಾದರೂ ಹೇಗೆ? ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ನಡೆದು ಹಲವು ವರ್ಷಗಳೇ ಕಳೆದಿವೆ. ಸರ್ಕಾರವು ಹೇಳಿಕೆಯಲ್ಲಿಯೇ ಕಾಲಹರಣ ಮಾಡುವುದು ಸರಿಯಲ್ಲ. ಸಕಾಲದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕಿದೆ.

- ಪ್ರಶಾಂತ ಹೂಗಾರ, ವಿಜಯಪುರ

‘ಖಾದಿ’ಯ ಬಣ್ಣ ಬದಲಿಸುವ ಅಪಾಯ?

ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ನೌಕರರು ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ ಧರಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಖಾದಿ ಉತ್ಪನ್ನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರದ ಈ ಹೆಜ್ಜೆ ಸ್ವಾಗತಾರ್ಹ. ಆದರೆ, ಆ ನೆಪದಲ್ಲಿ ಸರ್ಕಾರಿ ನೌಕರರಿಗೆ ಖಾದಿ ತೊಡುವಂತೆ ಸೂಚಿಸುವುದು ಸರಿಯಲ್ಲ. ಖಾದಿ ತೊಡುವ ಔಚಿತ್ಯದ ಬಗ್ಗೆ, ಮಹತ್ವದ ಬಗ್ಗೆ ನೌಕರರಿಗೆ ಅರ್ಥವಾಗುವಂತೆ ಕಾರ್ಯಕ್ರಮ ರೂಪಿಸುವುದನ್ನು ಮಾಡಬೇಕು. ಅದರ ಹೊರತು ಆದೇಶದ ಮೂಲಕ ಮಾಡಲು ಹೊರಟರೆ ಮುಂದೆ ಬರುವ ಸರ್ಕಾರಗಳು ಆ ಖಾದಿಯ ಬಣ್ಣವನ್ನೂ ನಿರ್ಧರಿಸಬಹುದು. ಆದ್ದರಿಂದ ಇದನ್ನು ಸರ್ಕಾರಿ ಆದೇಶದಂತಲ್ಲದೆ ಅರಿವು ಮೂಡಿಸುವ ಕ್ರಮವಾಗಿ ನೋಡುವಂತಾಗಲಿ.

- ಹುಲಿಕುಂಟೆ ಮೂರ್ತಿ, ಬೆಂಗಳೂರು

ಬಜೆಟ್ ಪ್ರತಿ: ಸ್ಥಳೀಯ ಭಾಷೆ ನಿರ್ಲಕ್ಷ್ಯ

ಕೇಂದ್ರ ಸರ್ಕಾರವು ಪ್ರತಿವರ್ಷ ಬಜೆಟ್ ಮತ್ತು ಆರ್ಥಿಕ ಸಮೀಕ್ಷೆಯ ವರದಿಗಳನ್ನು ವೆಬ್ಸೈಟ್ನಲ್ಲಿ ಬಿಡುಗಡೆ ಮಾಡುತ್ತದೆ. ಅದರ ವಿವರವು ಹಿಂದಿ ಮತ್ತು ಇಂಗ್ಲಿಷ್ನಲ್ಲಿರುತ್ತದೆ. ಇದರಿಂದ ಸ್ಥಳೀಯ ಭಾಷೆಯಲ್ಲಿ ಕಲಿತವರು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ ಆರ್ಥಿಕ ಸಮೀಕ್ಷೆ ಮತ್ತು ಬಜೆಟ್ ಕುರಿತ ವಿವರ ಪ್ರಕಟಿಸ
ಬೇಕಿದೆ. ಇದರಿಂದ ದೇಶದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿದೆ. ಜೊತೆಗೆ, ಪ್ರಾದೇಶಿಕ ಭಾಷೆಗಳಿಗೂ ಹೆಚ್ಚಿನ ಮನ್ನಣೆ ನೀಡಿದಂತಾಗುತ್ತದಲ್ಲವೆ?

- ಕಲ್ಲನಗೌಡ ಬಿರಾದಾರ, ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.