ಮಾಸಿಕ ₹ 15 ಸಾವಿರಕ್ಕಿಂತ ಹೆಚ್ಚು ಮೂಲವೇತನ ಪಡೆಯುತ್ತಿರುವ ಹಾಗೂ ‘ನೌಕರರ ಪಿಂಚಣಿ ಯೋಜನೆ- 1995’ರ ಅಡಿಯಲ್ಲಿ ಬಾರದ ಸಂಘಟಿತ ವಲಯದ ನೌಕರರಿಗೆ ನೂತನ ಪಿಂಚಣಿ ಯೋಜನೆ ರೂಪಿಸಲು ನೌಕರರ ಭವಿಷ್ಯನಿಧಿ ಸಂಘಟನೆಯು ಚಿಂತನೆ ನಡೆಸಿರುವುದಾಗಿ ತಿಳಿದುಬಂದಿದೆ. 1995ರ ಯೋಜನೆಯಡಿ ನಿವೃತ್ತ ನೌಕರರಿಗೆ ಈಗ ಕನಿಷ್ಠ ಪಿಂಚಣಿ ₹ 1,000 ಮಾತ್ರ ಬರುತ್ತಿದೆ (ಗರಿಷ್ಠ ₹ 5,000). ಇದು ಎಷ್ಟೋ ರಾಜ್ಯಗಳ ವೃದ್ಧಾಪ್ಯ ವೇತನಕ್ಕಿಂತ ಕಮ್ಮಿಯಿದೆ. 25- 30 ವರ್ಷಗಳು ವಂತಿಗೆ ನೀಡಿ ನಿವೃತ್ತರಾದ ಕಾರ್ಮಿಕರಿಗೆ ಗೌರವಯುತ ಬದುಕು ನಡೆಸಲು ಅಗತ್ಯವಾದ ಕನಿಷ್ಠ ಹಣವನ್ನು ಒದಗಿಸುವಷ್ಟಾದರೂ ಪಿಂಚಣಿಯನ್ನು ಹೆಚ್ಚಿಸಬೇಕಿದೆ.

ಈ ಯೋಜನೆಯಲ್ಲಿ ಒಮ್ಮೆ ನಿಗದಿಪಡಿಸಿದ ಮೊತ್ತ ಬದಲಾಗುವುದಿಲ್ಲ. ಸರ್ಕಾರದ ನೌಕರರಿಗೆ ತುಟ್ಟಿಭತ್ಯೆ ಬದಲಾದಾಗ ಅದು ಪಿಂಚಣಿದಾರರಿಗೂ ಅನ್ವಯವಾಗುತ್ತದೆ. 2016ರಲ್ಲಿ ಕನಿಷ್ಠ ಪಿಂಚಣಿಯನ್ನು ₹ 5,000ಕ್ಕೆ ಏರಿಸಲು ತಜ್ಞರು ವರದಿ ನೀಡಿದ್ದರೆಂಬ ಸುದ್ದಿ ಬಂದಿತ್ತು. ಮುಂದಿನ ತಿಂಗಳು ಸಭೆ ಸೇರಲಿರುವ ಇಪಿಎಫ್ಒ ಧರ್ಮದರ್ಶಿಗಳ ಮಂಡಳಿಯು ನಿವೃತ್ತ ನೌಕರರ ದುಃಸ್ಥಿತಿಯನ್ನು ಗಮನಿಸಿ, ಮಾನವೀಯ ದೃಷ್ಟಿಯಿಂದ ಕನಿಷ್ಠ ಪಿಂಚಣಿ ಯನ್ನು ₹ 5,000ಕ್ಕೆ ಏರಿಸಲು ಮನವಿ.

–ರಾ.ನಂ.ಚಂದ್ರಶೇಖರ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.