ಬುಧವಾರ, ಜನವರಿ 22, 2020
23 °C

ಮಕ್ಕಳಿಗೆ ತಿಳಿವಳಿಕೆ ನೀಡಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದೆ. ಇಂತಹ ಕೃತ್ಯಗಳ ವಿರುದ್ಧ ಕಾನೂನು ಕ್ರಮಗಳನ್ನು ಸರ್ಕಾರ ಬಲಪಡಿಸಬೇಕು. ಕಿರುಕುಳ ನಿಗ್ರಹಕ್ಕೆ ಸರ್ಕಾರ ಕೈಗೊಂಡ ಕಾನೂನು ಕ್ರಮಗಳು, ನೀಡುವ ಶಿಕ್ಷೆ, ದೌರ್ಜನ್ಯಗಳಿಂದ ಪಾರಾಗುವ ವಿಧಾನ, ರಕ್ಷಣೆಗಾಗಿ ಇರುವ ಸಹಾಯವಾಣಿಯ ಕುರಿತು ಮಕ್ಕಳಿಗೆ ತಿಳಿಸಬೇಕು.

ಆಗಾಗ್ಗೆ ಪೋಷಕರ ಸಭೆ ನಡೆಸಿ, ಹೆಣ್ಣುಮಕ್ಕಳ ಜೊತೆ ಹೇಗೆ ವರ್ತಿಸಬೇಕು ಎನ್ನುವುದರ ಬಗ್ಗೆ ಗಂಡುಮಕ್ಕಳಲ್ಲಿ ಅರಿವು ಮೂಡಿಸುವ ಬಗೆಯನ್ನು ತಿಳಿಸಿಕೊಡಬೇಕು. ಈ ಮೂಲಕ ಮನುಷ್ಯರಲ್ಲಿರುವ ಕೆಟ್ಟ ಮನಃಸ್ಥಿತಿಯನ್ನು ಹೋಗಲಾಡಿಸಿ, ಮಹಿಳೆಯರು ನಿರ್ಭೀತಿಯಿಂದ ಬದುಕುವ ಸಮಾಜ ರೂಪಿಸುವುದು ನಮ್ಮೆಲ್ಲರ ಆದ್ಯತೆ ಆಗಬೇಕು.

- ಶಿವಶಂಕರ ಎಸ್, ಮುತ್ತರಾಯನಹಳ್ಳಿ, ಮಧುಗಿರಿ

ಪ್ರತಿಕ್ರಿಯಿಸಿ (+)