ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ನದಿ ಮಾಲಿನ್ಯ ತೊಳೆಯಲು...

Last Updated 18 ಆಗಸ್ಟ್ 2022, 21:12 IST
ಅಕ್ಷರ ಗಾತ್ರ

ಗಂಗಾ ನದಿ ಶುದ್ಧೀಕರಣಕ್ಕೆ ಕೇಂದ್ರ ಸರ್ಕಾರವು ₹ 30,000 ಕೋಟಿ ಮಂಜೂರು ಮಾಡಿದೆ ಎಂದು ವರದಿಯಾಗಿದೆ. ಕೇಂದ್ರ ಜಲ ಆಯೋಗದ ವರದಿಯಂತೆ, ಗಂಗಾ ನದಿಯು ಒಳಚರಂಡಿ ವ್ಯವಸ್ಥೆಯಿಂದ ಮಲಿನವಾಗಿದೆ. ನದಿಯ ಬದಿಯಲ್ಲಿರುವ ಪಟ್ಟಣ, ಹಳ್ಳಿಗಳ 50 ಕೋಟಿ ಜನರ ಮಲ– ಮೂತ್ರ, ಕಾರ್ಖಾನೆ ತ್ಯಾಜ್ಯದಿಂದ ನೀರು ಕಲುಷಿತವಾಗಿದೆ. ಆದ್ದರಿಂದ ಗಂಗಾ ನದಿಯ ಮಾಲಿನ್ಯ ತೊಳೆಯಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಹೇಳಿದೆ.

ಒಳಚರಂಡಿಗೆ ಪರ್ಯಾಯವಾಗಿ, ಮಹಾತ್ಮ ಗಾಂಧಿ ಅವರ ಸಲಹೆಯಂತೆ ಪ್ರತೀ ಮನೆಗೆ ಎರಡು ಇಂಗು ಗುಂಡಿಗಳ ವ್ಯವಸ್ಥೆ ಮಾಡಿ, ಮಲಮೂತ್ರವನ್ನು ಜೈವಿಕ ಅನಿಲ ಯಂತ್ರಕ್ಕೆ ಸೇರಿಸಿ ಇಂಧನ ಪಡೆದು ನಂತರ ಇಂಗುಗುಂಡಿಗೆ ಸೇರಿಸಿದರೆ ಗೊಬ್ಬರ ದೊರೆಯುತ್ತದೆ. ನದಿ ಮಾಲಿನ್ಯ ತೊಳೆಯಲು ಇದೇ ಅತ್ಯುತ್ತಮ ಮಾರ್ಗ. ಗಂಗಾ ನದಿ ಶುದ್ಧೀಕರಣದ ಯೋಜನೆಯು ತೆರಿಗೆ ಹಣ ದೋಚುವ ತಂತ್ರ ಎಂಬಂತೆ ಜನರಿಗೆ ತೋರಬಾರದು.
ಡಾ. ಎಚ್.ಆರ್‌.ಪ್ರಕಾಶ್,ಕೆ.ಬಿ.ದೊಡ್ಡಿ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT