ಗುರುವಾರ , ಮೇ 19, 2022
21 °C

ಹಸಿವು ನೀಗಿಸಿ, ಶೀರ್ ಕುರ್ಮಾ ತಿನ್ನಿಸಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಮುಸ್ಲಿಮರಿಗೆ ಬಹಳ ಪವಿತ್ರವಾದ ರಂಜಾನ್ ತಿಂಗಳು ಆರಂಭವಾಗಿದೆ. ಸಂಯಮ ಮತ್ತು ಸೌಹಾರ್ದವನ್ನು ಪುನರುಜ್ಜೀವಿಸುವ ಅಪೂರ್ವ ಅವಕಾಶ. ಬಡತನ, ಹಸಿವು, ನಿರುದ್ಯೋಗ ಇವುಗಳಿಗೆ ಜಾತಿ ಧರ್ಮಗಳಿಲ್ಲ. ಈ ತಿಂಗಳು ಜಾತಿಭೇದವಿಲ್ಲದೇ ಬಡವರಿಗೆ ಅನ್ನ ನೀಡಿ, ಹಸಿವನ್ನು ನೀಗಿಸಿ, ಶೀರ್ ಕುರ್ಮಾ ತಿನ್ನಿಸಿ, ಜೀವನೋಪಾಯವನ್ನು ಕಲ್ಪಿಸಿ. ಈ ತಿಂಗಳ ಎಲ್ಲ ವಿಶೇಷ ಆಚರಣೆಗಳಲ್ಲಿ, ಮಸೀದಿಗಳ ಒಳಭಾಗದ ದರ್ಶನಕ್ಕಾಗಿ ನೆರೆಹೊರೆಯ ದೇಶಬಾಂಧವರನ್ನು ಆಹ್ವಾನಿಸಿ. ಮಸೀದಿಯೂ ಈ ದೇಶದ ಸಂವಿಧಾನ ನೀಡಿದ ಹಕ್ಕುಗಳಲ್ಲಿ ಒಂದು ಎಂಬುದನ್ನು ಪ್ರತಿಪಾದಿಸಲು, ಮಸೀದಿಯಲ್ಲಿ ಸಂವಿಧಾನದ ಪ್ರಸ್ತಾವನೆಯ ಭಿತ್ತಿಚಿತ್ರವನ್ನು ಹಾಕಿ.

ಕಳೆದ ಕೆಲವು ದಿನಗಳಿಂದ ಸಮಾಜದ ಎಲ್ಲ ಸಮುದಾಯದವರ ಮನಸ್ಸುಗಳಲ್ಲಿ ಅಶಾಂತಿ, ಅಸಮಾಧಾನ, ಅಸಂಯಮ ಮನೆಮಾಡಿದೆ. ಅದನ್ನು ಹೋಗಲಾಡಿಸುವಂತೆ ನಿಮ್ಮ ಎಲ್ಲ ಪ್ರಾರ್ಥನೆಗಳಲ್ಲಿ ಅಲ್ಲಾಹುವಿನಲ್ಲಿ ಬೇಡಿಕೊಳ್ಳಿ.

- ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು