ಮಂಗಳವಾರ, ಜನವರಿ 21, 2020
20 °C

ಐಕ್ಯಮಂಟಪ: ಸರ್ಕಾರ ಇತ್ತ ಗಮನಹರಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

800 ವರ್ಷಗಳ ಹಿಂದೆಯೇ ವಿಶ್ವಕ್ಕೆ ಸಮಾನತೆಯ ಸಂದೇಶವನ್ನು ಸಾರಿದವರು ಬಸವಣ್ಣ. ಅನುಭವ ಮಂಟಪದಂತಹ ಅದ್ಭುತ ಕಲ್ಪನೆಯನ್ನು ಸಾಕಾರಗೊಳಿಸಿದವರು. ವಚನ ಸಾಹಿತ್ಯದ ಮೂಲಕ ಜಾತಿ– ಪಂಥ ಭೇದ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದವರು. ಈ ಸಮಾನತೆಯ ಸಂದೇಶ ಸಾರುವ ಹಾದಿಯಲ್ಲಿ ಸಾಗುತ್ತಿರುವ ಬಸವಣ್ಣನವರ ಅನುಯಾಯಿಗಳು ವಿದೇಶಗಳಲ್ಲಿಯೂ ಅವರ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ನೋವಿನ ಸಂಗತಿಯೆಂದರೆ, ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯಮಂಟಪದ ಕಂಬಗಳು ಬಿರುಕು ಬಿಟ್ಟಿವೆ. ಸರ್ಕಾರ ಇತ್ತ ಗಮನಹರಿಸಿ, ಐಕ್ಯಮಂಟಪದ ಪುನರ್ ನಿರ್ಮಾಣಕ್ಕೆ ಮುಂದಾಗಬೇಕು.

ಶಂಕರಗೌಡ ಬಿರಾದಾರ, ಮುಳಸಾವಳಗಿ
 

ಪ್ರತಿಕ್ರಿಯಿಸಿ (+)