ಶುಕ್ರವಾರ, ಡಿಸೆಂಬರ್ 4, 2020
21 °C

ವಾಚಕರ ವಾಣಿ : ಕೌಶಲ ಆಧರಿಸಿದ ಯೋಜನೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ನಿಗಮ, ಪ್ರಾಧಿಕಾರಗಳ ರಚನೆಯ ಬಗ್ಗೆ ಪರ– ವಿರೋಧದ ಚರ್ಚೆಗಳು ನಡೆಯುತ್ತಿವೆ. ಓಲೈಕೆ ರಾಜಕೀಯವನ್ನು ನಿಲ್ಲಿಸಿ, ಬಹುತ್ವ ಭಾರತದ ಕೌಶಲಗಳನ್ನು ಕೇಂದ್ರೀಕರಿಸಿ ನಿಗಮ, ಪ್ರಾಧಿಕಾರಗಳನ್ನು ರಚಿಸಿದರೆ ಸಮಾಜಮುಖಿಯಾದೀತು. ಶರಣರ ಸದಾಶಯದ ಕಾಯಕ, ಕೌಶಲಗಳನ್ನು ಆಧರಿಸಿ ಪ್ರಾಧಿಕಾರ, ನಿಗಮಗಳನ್ನು ರಚಿಸುವಂತಾಗಲಿ.

ಪೌರಕಾರ್ಮಿಕರ ಪ್ರಾಧಿಕಾರ, ಕಾಷ್ಠಶಿಲ್ಪಿಗಳ ಅಭಿವೃದ್ಧಿ ನಿಗಮ, ಕೇಶ ವಿನ್ಯಾಸಕರ ಅಭಿವೃದ್ಧಿ ನಿಗಮ, ಕಟ್ಟಡ ಕಾರ್ಮಿಕರ ಪ್ರಾಧಿಕಾರ, ಗೌಳಿಗರ ಅಭಿವೃದ್ಧಿ ನಿಗಮ... ಹೀಗೆ ವೃತ್ತಿಕೌಶಲ ಹಾಗೂ ಶ್ರಮ ಆಧಾರಿತ ನಿಗಮ, ಪ್ರಾಧಿಕಾರ ರಚಿಸಿದರೆ ಜನಸಾಮಾನ್ಯರಿಗೆ ಹೆಚ್ಚು ಉಪಯುಕ್ತವಾಗುತ್ತದೆ.

-ಮಹಾದೇವ ಹಡಪದ ನಟುವರ, ಧಾರವಾಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು