ವಾಚಕರ ವಾಣಿ: ರಾಜ್ಯಪಾಲರು ಕನ್ನಡ ಕಲಿಯಲು ಮುಂದಾಗಿರುವುದು ಮಾದರಿ ನಡೆ

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಕನ್ನಡ ಕಲಿಯಲು ಮುಂದಾಗಿರುವ ಸುದ್ದಿ ತಿಳಿದು ನನಗೆ ಬಹಳ ಆಶ್ಚರ್ಯ ಹಾಗೂ ಸಂತೋಷವಾಯಿತು.
ಇದನ್ನೂ ಓದಿ: ಕನ್ನಡ ಕಲಿಯುತ್ತಿರುವ ರಾಜ್ಯಪಾಲ: ಭಾಷೆ ಕಲಿಯಲು ನಿಘಂಟುಗಳ ಖರೀದಿ
ರಾಜ್ಯಪಾಲರು ಮೂಲತಃ ಮಧ್ಯಪ್ರದೇಶದವರು. ಅವರು ಅಧಿಕಾರ ಸ್ವೀಕರಿಸಿ ಕೆಲವೇ ದಿನಗಳಾಗಿದ್ದು, ಕನ್ನಡ ಕಲಿಕೆಗೆ ಆಸಕ್ತಿ ತೋರಿರುವುದು ಸ್ವಾಗತಾರ್ಹ ಬೆಳವಣಿಗೆ. ಅಷ್ಟೇ ಅಲ್ಲದೆ ಪ್ರತಿದಿನ ಅಧಿಕಾರಿಗಳು ಹಾಗೂ ಅವರ ಸಿಬ್ಬಂದಿ ಜೊತೆ ಕನ್ನಡದಲ್ಲೇ ಮಾತನಾಡುವ ಪ್ರಯತ್ನವನ್ನು ಸಹ ಮಾಡುತ್ತಿರುವುದು ಕನ್ನಡ ಭಾಷೆಯ ಮೇಲೆ ಅವರಿಗಿರುವ ಪ್ರೀತಿ ಹಾಗೂ ಗೌರವವನ್ನು ತೋರಿಸುತ್ತದೆ.
ಕರ್ನಾಟಕದಲ್ಲಿ ಇದ್ದುಕೊಂಡು ಇನ್ನೂ ಕನ್ನಡ ಭಾಷೆಯನ್ನು ಕಲಿಯದ ಕನ್ನಡೇತರ ಅಧಿಕಾರಿಗಳಿಗೆ ಗೆಹಲೋತ್ ಮಾದರಿಯಾಗಿದ್ದಾರೆ.
- ಎಲ್.ಎಸ್.ಶಿವಮೂರ್ತಿ, ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.