ಐಎಸ್ಐ ಗುರುತಿಲ್ಲದ ಹೆಲ್ಮೆಟ್‌ಗಳನ್ನು ಜಪ್ತಿ ಮಾಡಿ ಪೊಲೀಸರು ನಾಶಪಡಿಸಿದ್ದಾರೆ (ಪ್ರ.ವಾ., ಜ. 26). ಇದು ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆಗೆ ಹಿಡಿದ ಕನ್ನಡಿಯಾಗಿದೆ. ಐಎಸ್ಐ ಗುರುತಿಲ್ಲದ ಹೆಲ್ಮೆಟ್‌ಗಳನ್ನು ಉತ್ಪಾದಿಸಲು ಒಂದು ಇಲಾಖೆಯಿಂದ ಅನುಮತಿ ನೀಡಿ ಮತ್ತೊಂದು ಇಲಾಖೆಯಿಂದ ಅದನ್ನು ನಿಷೇಧಿಸುವುದು ಆಡಳಿತ ಲೋಪವೇ ಸರಿ. ರಾಜ್ಯದಾದ್ಯಂತ ರಸ್ತೆ ರಸ್ತೆಗಳಲ್ಲಿ ಕಳಪೆ ಗುಣಮಟ್ಟದ, ಐಎಸ್ಐ ಗುರುತಿಲ್ಲದ ಹೆಲ್ಮೆಟ್‌ಗಳನ್ನು ರಾಜಾರೋಷವಾಗಿ ಮಾರಲಾಗುತ್ತಿದೆ. ಪೊಲೀಸ್ ಇಲಾಖೆಗೆ ಈ ಹಗಲು ವ್ಯಾಪಾರ (ದರೋಡೆ) ಕಣ್ಣಿಗೆ ಕಾಣುತ್ತಿಲ್ಲವೇ? ನಿಷೇಧಿಸಲೇ ಬೇಕಿದ್ದರೆ ಇಂತಹ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳ ಉತ್ಪಾದನೆಯನ್ನು ನಿಷೇಧಿಸಬೇಕಲ್ಲವೆ?

ಒಂದು ವೇಳೆ ಸರ್ಕಾರದ ಕಣ್ತಪ್ಪಿಸಿ ಉತ್ಪಾದನೆಯಾಗುತ್ತಿವೆ ಎಂದಾದರೆ ಇವುಗಳನ್ನು ಜಪ್ತಿ ಮಾಡಬೇಕಾಗಿರುವುದು ರಸ್ತೆ ಬದಿಯ ವ್ಯಾಪಾರಿಗಳಿಂದ ಅಲ್ಲವೇ? ಕಳಪೆ ಗುಣಮಟ್ಟದ ಹೆಲ್ಮೆಟ್ ಉತ್ಪಾದನೆಗೆ, ಮಾರಾಟಕ್ಕೆ ಅವಕಾಶ ನೀಡಿ, ಸವಾರರಿಂದ ಅವನ್ನು ಜಪ್ತಿ ಮಾಡುವ ಪೊಲೀಸರ ನಡೆ ಸಮರ್ಥನೀಯವಲ್ಲ. ಸವಾರರಿಗೆ ಅನಗತ್ಯ ಕಿರುಕುಳ ನೀಡುತ್ತಾರೆ ಎಂಬ ಟೀಕೆಗೆ ಗುರಿಯಾಗಿರುವ ಸಂಚಾರ ಪೊಲೀಸರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಸಮಸ್ಯೆಯ ಮೂಲವನ್ನು ಹುಡುಕಿ ಅದನ್ನು ಸರಿಪಡಿಸಲಿ.

- ಸುಘೋಷ ಸ. ನಿಗಳೆ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.