ಯುದ್ಧ, ಪ್ರೇಮ, ಚುನಾವಣೆ

ಬುಧವಾರ, ಏಪ್ರಿಲ್ 24, 2019
30 °C

ಯುದ್ಧ, ಪ್ರೇಮ, ಚುನಾವಣೆ

Published:
Updated:

ಯುದ್ಧ ಮತ್ತು ಪ್ರೇಮದಲ್ಲಿ ಎಲ್ಲವೂ ಸರಿ ಎಂಬ ಗಾದೆ ಮಾತಿನಲ್ಲಿ ಈಗ ‘ಚುನಾವಣೆ’ ಎಂಬ ಪದವನ್ನೂ ಸೇರಿಸಬಹುದಾಗಿದೆ. ಇಲ್ಲಿ ಗೆಲುವೇ ಮುಖ್ಯ. ಗೆಲುವಿನ ದಾರಿಗಳು ನಗಣ್ಯ.

ನಮ್ಮ ರಾಜಕೀಯ ನೇತಾರರ ಪ್ರಚಾರ ವೈಖರಿ, ಅವರು ಬಳಸುವ ಭಾಷೆ, ಕಾರುವ ದ್ವೇಷ, ಅಸೂಯೆ, ಅಧಿಕಾರ ದಾಹ ಹೇಳಿದಷ್ಟೂ ಅಸಹ್ಯಕರ. ಇವರು ಸಾರ್ವಜನಿಕ ಜೀವನದ ನ್ಯೆತಿಕ ನೆಲೆಗಟ್ಟನ್ನೇ ಹಾಳು ಮಾಡಿದ್ದಾರೆ.

ಜನರ ದಾರಿ ತಪ್ಪಿಸಿ, ಎಲ್ಲ ವಾಮ ಮಾರ್ಗಗಳನ್ನೂ ಬಳಸಿ ಗದ್ದುಗೆ ಏರಲು ಹವಣಿಸುತ್ತಿದ್ದಾರೆ. ತತ್ವವಿಲ್ಲದ ರಾಜಕೀಯ, ಏಳು ಮಹಾಪಾಪಗಳಲ್ಲಿ ಒಂದು ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ತಾತ್ವಿಕ ನಡೆ-ನುಡಿ ಇಂದು ಯಾರಿಗೆ ಬೇಕಾಗಿದೆ? ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
-ವೆಂಕಟೇಶ ಮಾಚಕನೂರ, ಧಾರವಾಡ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !