ರಾಜ್ಯದ ಆಯ್ದ 75 ಸರ್ಕಾರಿ ಶಾಲೆಗಳನ್ನು ‘ನೇತಾಜಿ ಅಮೃತ ಶಾಲೆಗಳು’ ಎಂದು ಘೋಷಿಸಿ, ಈ ಶಾಲೆಗಳಲ್ಲಿ ಎನ್‌ಸಿಸಿ ಘಟಕಗಳನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರ (ಪ್ರ.ವಾ., ಜ. 26) ಸ್ವಾಗತಾರ್ಹ. ಆದರೆ ಈ ಯೋಜನೆಯು ವಿದ್ಯಾರ್ಥಿಗಳಿಗೆ ಉಪಯೋಗಕ್ಕೆ ಬರುವಂತೆ ಆಗಬೇಕು. ನಾನು ಮಾಧ್ಯಮಿಕ ಶಾಲೆಯಿಂದ ಪದವಿವರೆಗೂ ಎನ್‌ಸಿಸಿ ತರಬೇತಿ ಪಡೆದೆ. ಆದರೆ ಸೈನಿಕ ಹುದ್ದೆಗೆಂದು ಸಂದರ್ಶನಕ್ಕೆ ಹೋದಾಗ ಎನ್‌ಸಿಸಿ ಪ್ರಮಾಣಪತ್ರವನ್ನು ಹತ್ತಿರ ಕೂಡ ಸೇರಿಸಲಿಲ್ಲ. ಇಂತಹ ತರಬೇತಿಯು ಉಪಯೋಗಕ್ಕೆ ಬಾರದಿದ್ದರೆ ಯಾವ ಮಹತ್ಸಾಧನೆಗಾಗಿ ಅದಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸಬೇಕು?

ಸೈನಿಕ ಹುದ್ದೆಯ ಸಂದರ್ಶನದಲ್ಲಿ ಎತ್ತರದ ಪ್ರಶ್ನೆಯೂ ಎದುರಾಯಿತು. ಆದ್ದರಿಂದ ಇನ್ನು ಮುಂದೆ ಎನ್‌ಸಿಸಿಗೆ ವಿದ್ಯಾರ್ಥಿಗಳ ಎತ್ತರ, ಪರ್ಸನಾಲಿಟಿ ಎಲ್ಲವನ್ನೂ ಪರಿಶೀಲಿಸಿ, ಮುಂದೆ ಅಂತಹ ಹುದ್ದೆಗಳಿಗೆ ತಕ್ಕ ಮಟ್ಟಿಗಾದರೂ ಸರಿಹೊಂದುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು ಸರಿಯಾದ ಕ್ರಮವಾಗಬಹುದು. ಅಲ್ಲದೆ ಕೆಲಸಕ್ಕಾಗಿ ಸಂದರ್ಶನಕ್ಕೆ ಹೋದಾಗ ಎನ್‌ಸಿಸಿ ಪ್ರಮಾಣಪತ್ರವನ್ನು ಪರಿಗಣಿಸುವಂತೆ ಮಾಡುವುದು ಸೂಕ್ತ.

- ಬಾಲಕೃಷ್ಣ ಎಂ.ಆರ್.,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.