ಟೆಲಿಗ್ರಾಮ್ ಒಂದು ಮುಕ್ತ ವೇದಿಕೆಯ ಸಾಮಾಜಿಕ ಜಾಲತಾಣವಾಗಿದ್ದು, ಕೆಲವೊಂದು ಗ್ರೂಪ್‌ಗಳನ್ನು ಅದರ ಅಡ್ಮಿನ್ ಲಿಂಕ್ ಕಳುಹಿಸಿದರೆ ಮಾತ್ರ ಸೇರಿಕೊಳ್ಳಬಹುದು. ಇನ್ನು ಕೆಲವೊಂದು ಗ್ರೂಪ್‌ಗಳನ್ನು ಟೆಲಿಗ್ರಾಮ್ ಸರ್ಚ್ ಬಾರ್‌ನಲ್ಲಿ ಗ್ರೂಪ್‌ನ ಹೆಸರು ಟೈಪ್ ಮಾಡಿ ಸೇರಿಕೊಳ್ಳಬಹುದು. ಕರ್ನಾಟಕದ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯೋಗವಾಗುವ ಗ್ರೂಪ್‌ಗಳಲ್ಲಿ ಇದೀಗ ಅನಾಮಿಕ ಎಂದೇ ಕರೆಯಬಹುದಾದ ‘ವಿದೇಶಿ ಪ್ರೊಫೈಲ್’ಗಳು ಸೇರಿಕೊಂಡಿವೆ. ಇಂಥವರು ಸುಲಭವಾಗಿ ಸರ್ಚ್ ಬಾರ್‌ನಲ್ಲಿ ಅಥವಾ ಗೂಗಲ್‌ನಲ್ಲಿ ಪ್ರಸಿದ್ಧ ಮತ್ತು ಒಪೆನ್ (ಯಾರು ಬೇಕಾದರೂ ಸೇರಿಕೊಳ್ಳಲು ಅನುಕೂಲ) ಇರುವ ಟೆಲಿಗ್ರಾಮ್ ಗ್ರೂಪ್ ಸೇರಿಕೊಂಡು, ಅಲ್ಲಿ ಸಿಗುವ ಅಂದರೆ ಗ್ರೂಪ್ ಇನ್ ಅಭ್ಯರ್ಥಿಗಳು ಹಾಕುವ ಮಾಹಿತಿಯ ದುರ್ಬಳಕೆ ಮಾಡಿಕೊಳ್ಳುವ ಸಂಭವ ಇರುತ್ತದೆ. ಇದಕ್ಕೆ ಕಡಿವಾಣ ಹಾಕಲು ವಿದೇಶಿ ಖಾತೆಗಳನ್ನು ತೆಗೆದುಹಾಕುವ ಕೆಲಸ ಅಡ್ಮಿನ್‌ಗಳಿಂದ ಆಗಬೇಕು.

ಬಸನಗೌಡ ಪಾಟೀಲ,ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.