ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟು, ಅಧಿಕಾರವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ವಿನ್‌ಸ್ಟನ್ ಚರ್ಚಿಲ್ ಅವರು, ‘ಅಯೋಗ್ಯರಿಗೆ ಅಧಿಕಾರ ಹಸ್ತಾಂತರಿಸಿದರೆ ಅನಾಹುತ ತಪ್ಪಿದ್ದಲ್ಲ’ ಎಂದು ಬ್ರಿಟಿಷ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ನಮ್ಮ ಸಂಸದರು, ಶಾಸಕರ ವರ್ತನೆಯನ್ನು ನೋಡಿದರೆ ಅವರು ನುಡಿದ ಭವಿಷ್ಯ ನಿಜವಾಗುತ್ತಿದೆಯೇ ಎಂಬ ಭಾವನೆ ಮೂಡುತ್ತಿದೆ.

ತೆರಿಗೆದಾರರ ಹಣದಲ್ಲಿ ಹತ್ತು ಹಲವು ಅನುಕೂಲಗಳನ್ನು ಪಡೆಯುತ್ತಿರುವ ಜನಪ್ರತಿನಿಧಿಗಳು ಜವಾಬ್ದಾರಿಯನ್ನು ಅರಿತುಕೊಂಡು ವರ್ತಿಸುತ್ತಿಲ್ಲ ಎಂಬುದು ವಿಷಾದನೀಯ. ಎಲ್ಲ ಜನಪ್ರತಿನಿಧಿಗಳೂ ಹೀಗಿಲ್ಲ ಎಂಬುದು ಸಮಾಧಾನಪಡುವ ವಿಷಯ. ಸದನದ ಕಲಾಪಕ್ಕೆ ಅಡ್ಡಿಪಡಿಸುವ, ಘೋಷಣೆ ಕೂಗುವ, ಸಭಾಧ್ಯಕ್ಷರ ಪೀಠದ ಮುಂದೆ ಬಂದು ಅಶಿಸ್ತಿನಿಂದ ವರ್ತಿಸುವ ಸಂಸದ, ಶಾಸಕರ ವರ್ತನೆ ನೋಡಿದರೆ ಚರ್ಚಿಲ್ ಅವರ ಮಾತುಗಳು ನೆನಪಾಗುತ್ತವೆ.

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೂ, ‘ಸದನದ ಕಲಾಪಕ್ಕೆ ತಡೆ ಒಡ್ಡಬಾರದು, ಚರ್ಚೆಯ ಮೂಲಕ ಸಮಾಧಾನ ಕಂಡುಕೊಳ್ಳಬೇಕು’ ಎಂದು ಸೂಚಿಸಿದ್ದರು. ಈ ಮಾತುಗಳನ್ನು ಸ್ಮರಿಸಿಕೊಂಡು ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.