ಈಗ ತಿಳಿಯಿತೇ ರಾಜಕಾರಣದ ಆಳ-ಅಗಲ?!

‘ರಾಜಕಾರಣವೆಂದರೆ ಕೊಚ್ಚೆಯಲ್ಲಿ ಬಿದ್ದ ಅನುಭವ. ರಾಜಕಾರಣವೇ ಬೇಡ ಅನ್ನಿಸುತ್ತಿದೆ’ ಎಂದು ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಹೇಳಿಕೊಂಡಿದ್ದಾರೆ (ಕಿಡಿನುಡಿ, ಪ್ರ.ವಾ., ಮಾರ್ಚ್ 25). ಅಲ್ಲ ಸ್ವಾಮಿ, ನೀವು ಇದೇ ಪ್ರಥಮ ಬಾರಿಗೆ ಶಾಸಕರಾಗಿದ್ದೀರಿ, ನೀವು ಶಾಸಕರಾಗಿ ಇನ್ನೂ ಎರಡು ವರ್ಷಗಳೂ ಪೂರ್ಣಗೊಂಡಿಲ್ಲ. ಆಗಲೇ ನಿಮಗೆ ರಾಜಕಾರಣ ಬೇಡ ಅನ್ನಿಸುತ್ತಿದೆಯೇ? ಈಗ ತಿಳಿಯಿತೇ ನಿಮಗೆ ರಾಜಕಾರಣದ ಆಳ-ಅಗಲ?! ಆದರೆ ಬಹಳಷ್ಟು ರಾಜಕೀಯ ಪುಢಾರಿಗಳು, ತಾವು ಜೀವನದಲ್ಲಿ ಒಮ್ಮೆಯಾದರೂ ಶಾಸಕರಾದರೆ ತಮ್ಮ ಜನ್ಮ ಸಾರ್ಥಕ ಎಂದುಕೊಂಡಿದ್ದಾರೆ. ಕೆಲವರು 20- 30 ವರ್ಷಗಳಿಂದಲೂ ಶಾಸಕರಾಗಿದ್ದಾರೆ. ಅವರು ಹೇಗೆ ಈ ಕ್ಷೇತ್ರಕ್ಕೆ ಹೊಂದಿಕೊಂಡಿರಬಹುದು? ಅದಕ್ಕೇ ಹೇಳುವುದಿರಬಹುದು ‘ರಾಜಕೀಯ ಕ್ಷೇತ್ರ ಎನ್ನುವುದು ಮನುಷ್ಯನ ಕಡೆಯ ಆಯ್ಕೆ’ ಎಂದು!

-ಬೂಕನಕೆರೆ ವಿಜೇಂದ್ರ, ಮೈಸೂರು

ಯೋಜನೆ ಫಲಪ್ರದವಾಗಲು ಸಂಘಟನೆ ಮುಖ್ಯ

ರಾಜ್ಯದ ಆಹಾರ ಪಾರ್ಕ್ಗಳ ಕಾರ್ಯವೈಖರಿಗೆ ಸಂಬಂಧಿಸಿದ ಲೇಖನ (ಒಳನೋಟ, ಪ್ರ.ವಾ., ಮಾರ್ಚ್ 23) ರೈತರ ಕಣ್ಣು ತೆರೆಸುವಂತಿದೆ. ರಾಜ್ಯದಲ್ಲಿರುವ ನಾಲ್ಕು ಆಹಾರ ಪಾರ್ಕ್ಗಳ ಪೈಕಿ ಮಾಲೂರಿನದು ಬಹಳಷ್ಟು ಸುಸಜ್ಜಿತವಾಗಿದ್ದರೂ ಅದರ ಸರಿಯಾದ ಬಳಕೆ ಆಗಿಲ್ಲದಿರುವುದು ವಿಷಾದಕರ. ಹೀಗೆಯೇ ವಿಶೇಷ ಆರ್ಥಿಕ ವಲಯಗಳು 2005ರ ನಂತರ ಸ್ಥಾಪಿಸಲ್ಪಟ್ಟವು. ಕರ್ನಾಟಕದಲ್ಲಿ ಅನುಮೋದನೆ ಪಡೆದ 63ರ ಪೈಕಿ 31 ಮಾತ್ರ ಕಾರ್ಯ ನಿರ್ವಹಿಸಿದವು. ಫಿಸ್ಕಲ್ ಪಾಲಿಸಿ ಇನ್ಸ್ಟಿಟ್ಯೂಟ್ 2020ರಲ್ಲಿ ಸಿದ್ಧಪಡಿಸಿದ ವರದಿಯ ಪ್ರಕಾರ, ‘ಹೆಚ್ಚಿನವು ಕಾಗದದ ಮೇಲೇ ಉಳಿದವು’. ಆರು ವಿಶೇಷ ಕೃಷಿ ಉತ್ಪಾದನಾ ವಲಯಗಳು 2018ರಲ್ಲಿ ಘೋಷಿತವಾದವು. ಈಗ ಅವು ಉಪಯುಕ್ತ ಸ್ಥಿತಿಗೆ ಬಂದಿವೆಯೇ ಎಂದು ಕರ್ನಾಟಕ ಸರ್ಕಾರ ತಿಳಿಸಬೇಕು.

ನೂರಾರು ಎಕರೆ ಪ್ರದೇಶವನ್ನು ವಶಕ್ಕೆ ಪಡೆಯಲಾಗುತ್ತದೆ. ಆದರೆ ಹಲವು ವರ್ಷಗಳ ನಂತರವೂ ಉದ್ಯಮಗಳು ಕಾರ್ಯಾರಂಭ ಮಾಡಿರುವುದಿಲ್ಲ. ಜಾಗ ಪಡೆದವರು ಮರುಗುತ್ತಿಗೆ (ಸಬ್ಲೀಸ್) ನೀಡುವುದು, ಆಮೇಲೂ ಏನೂ ಆಗದಿರುವುದು- ಕೊನೆಗೆ ರೈತನಿಗೆ ಏನು ಉಪಯೋಗ? ವಿಶೇಷ ಎಂಬ ಗುಣವಾಚಕ ಸೇರಿಸಿದ ಮಾತ್ರಕ್ಕೆ ಯೋಜನೆಗಳು ಫಲಪ್ರದ ಆಗಿಬಿಡುವುದಿಲ್ಲ. ಕೃಷಿ, ಆಹಾರ ಸಂಬಂಧಿತ ಯೋಜನೆಗಳು ಯಶಸ್ವಿಯಾಗಲು ರೈತರ ಉತ್ಪಾದನಾ ಸಂಸ್ಥೆಗಳ ಸಂಘಟನೆಯೂ ಮುಖ್ಯ.

-ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಪ್ಲಾಸ್ಟಿಕ್ ಬಾಟಲಿ ನಿಷೇಧಕ್ಕೆ ಬೇಕು ಪೂರಕ ಕ್ರಮ

ನೀರಿನ ಖಾಲಿ ಬಾಟಲಿಯ ಮರು ಖರೀದಿಗೆ ನಿಯಮ ರೂಪಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿರುವುದು ಶ್ಲಾಘನೀಯ. ಮುಂದೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ, ಪ್ಲಾಸ್ಟಿಕ್ನಿಂದ ಪರಿಸರ ಹಾಳಾಗುತ್ತಿರುವುದನ್ನು ಸ್ವಲ್ಪಮಟ್ಟಿಗಾದರೂ ತಡೆಯಬಹುದು. ಮೊನ್ನೆ ಒಂದು ಮದುವೆಯಲ್ಲಿ ಎರಡು ಟ್ರ್ಯಾಕ್ಟರ್ ತುಂಬಾ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಸಿದ್ದುದನ್ನು ನೋಡಿ ತಲೆ ತಿರುಗಿತು. ಈ ಪ್ರಪಂಚದಲ್ಲಿ ಇರುವ ಇತರ ಜೀವಿಗಳು ಪರಿಸರ ನಾಶ ಮಾಡದೇ ಬದುಕುತ್ತಿವೆ. ಆದರೆ ಈ ಮನುಷ್ಯ ಎಷ್ಟೊಂದು ಹಾಳು ಮಾಡುತ್ತಿದ್ದಾನಲ್ಲಾ ಎನ್ನಿಸಿತು.

ಆಂಧ್ರಪ್ರದೇಶದ ತಿರುಮಲ ಬೆಟ್ಟದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ನಿಷೇಧಿಸಲಾಗಿದೆ. ಅಲ್ಲಿನ ಅಂಗಡಿಗಳಲ್ಲಿ ಗಾಜಿನ ಬಾಟಲಿಯಲ್ಲಿ ನೀರು ಮಾರಾಟ ಮಾಡುತ್ತಿದ್ದು, ಬಾಟಲಿ ವಾಪಸು ಕೊಟ್ಟರೆ ಅರ್ಧ ಹಣ ಹಿಂದಿರುಗಿಸುತ್ತಾರೆ. ನಮ್ಮ ಕೊಡಚಾದ್ರಿ ಬೆಟ್ಟದ ಪ್ರವೇಶ ದ್ವಾರದಲ್ಲಿ, ಪ್ಲಾಸ್ಟಿಕ್ ಬಾಟಲಿ ಇದ್ದವರಿಂದ ಹಣ ಪಡೆದು ಅವರನ್ನು ಒಳಗೆ ಬಿಡುತ್ತಾರೆ. ವಾಪಸ್ ಬಂದು ಅದನ್ನು ತೋರಿಸಿದರೆ ಹಣ ವಾಪಸ್ ಕೊಡುತ್ತಾರೆ. ಎನ್.ಆರ್.ಪುರ ಪಕ್ಕದ ದಾನಿವಾಸ ದುರ್ಗಾಂಬಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲಿಗೆ ನಿಷೇಧವಿದೆ. ಹೀಗೆ ನೀರಿನ ಪ್ಲಾಸ್ಟಿಕ್ ಬಾಟಲಿ ನಿಷೇಧ ಮಾಡುವ ಬಗ್ಗೆ ಚಿಂತನೆ ಮಾಡಿ, ಎಲ್ಲರೂ ಸಹಕರಿಸಿದರೆ ಈ ಕಾರ್ಯ ಅಸಾಧ್ಯವೇನೂ ಅಲ್ಲ.

-ವಿ.ತಿಪ್ಪೇಸ್ವಾಮಿ, ಹಿರಿಯೂರು

ಸೌರತ್ಯಾಜ್ಯ: ನಡೆಯಲಿ ತ್ವರಿತ ವಿಲೇವಾರಿ

ಪರಿಸರಸ್ನೇಹಿ ಸುಸ್ಥಿರ ಇಂಧನಮೂಲವಾಗಿ ಸೌರವಿದ್ಯುತ್ತಿಗೆ ಆದ್ಯತೆ ದೊರಕಿರುವುದು ಸಹಜ. ಈ ದಿಸೆಯಲ್ಲಿ ರಾಜ್ಯ ಸರ್ಕಾರವು ಕೃಷಿ ನೀರಾವರಿಗಾಗಿ ಜಾರಿಗೆ ತಂದಿರುವ ‘ಕರ್ನಾಟಕ ಸೂರ್ಯ ರೈತ ಯೋಜನೆ’ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪ್ರಧಾನ ಮಂತ್ರಿ ಗೃಹ ಸೌರವಿದ್ಯುತ್ ಯೋಜನೆ’ ಸ್ವಾಗತಾರ್ಹ. ಇವು ವ್ಯಾಪಕವಾಗಿ ಅನುಷ್ಠಾನವಾಗುತ್ತಿರುವ ಈ ಕಾಲಘಟ್ಟದಲ್ಲಿ, ಹೆಚ್ಚುತ್ತಿರುವ ಸೌರತ್ಯಾಜ್ಯದ ಸೂಕ್ತ ಹಾಗೂ ತ್ವರಿತ ವಿಲೇವಾರಿಗೂ ಗರಿಷ್ಠ ಗಮನ ನೀಡಬೇಕಾಗಿದೆ. ಹಿಂದಿನ ಎರಡು ದಶಕಗಳಿಂದ ರಾಜ್ಯದಾದ್ಯಂತ ಸೌರವಿದ್ಯುತ್ ಘಟಕಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ವಿವಿಧ ಸರ್ಕಾರಿ ಹಾಗೂ ಖಾಸಗಿ ಪ್ರಾಯೋಜಕತ್ವ ಯೋಜನೆಗಳ ಮೂಲಕ ಮನೆಬಳಕೆ ವಿದ್ಯುತ್ ಹಾಗೂ ರಸ್ತೆದೀಪ ಘಟಕಗಳು ಸ್ಥಾಪನೆಗೊಂಡಿವೆ. ಮಲೆನಾಡಿನ ಅರಣ್ಯ ಪ್ರದೇಶದಲ್ಲಿನ ಹಲವು ಹಳ್ಳಿಗಳು, ವನವಾಸಿ ಹಾಡಿಗಳು, ಪರಿಸರಸ್ನೇಹಿ ಪ್ರವಾಸತಾಣಗಳು ಸಹ ಸೌರವಿದ್ಯುತ್ ಸೌಲಭ್ಯ ಪಡೆದಿವೆ. ಆದರೆ, ಅಲ್ಲೆಲ್ಲ ಹಾಳಾದ ಸೌರಫಲಕ ಹಾಗೂ ಬ್ಯಾಟರಿಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಕಾರ್ಯ ಮಾತ್ರ ಆಗುತ್ತಿಲ್ಲ. ಇದರಿಂದಾಗಿ, ಸೌರಕೋಶಗಳಲ್ಲಿರುವ ಸೀಸ, ಕ್ಯಾಡ್ಮಿಯಂ, ಸಿಲೇನಿಯಂ, ಆರ್ಸೆನಿಕ್ನಂತಹ ವಿಷಕಾರಕ ಅಂಶಗಳು ಮಣ್ಣು ಹಾಗೂ ಜಲಮೂಲವನ್ನು ಸೇರಿ ಜನ– ಜಾನುವಾರು, ವನ್ಯಜೀವಿಗಳ ಸುರಕ್ಷತೆಗೆ ಭಂಗ
ತರುತ್ತಿವೆ.

ಸೌರತ್ಯಾಜ್ಯವನ್ನು ನಿಯಂತ್ರಿಸಬೇಕಾದದ್ದು ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು. ಇದಕ್ಕೆಂದೇ ಕೇಂದ್ರ ಪರಿಸರ ಇಲಾಖೆಯು ‘ಇ- ತ್ಯಾಜ್ಯ ನಿರ್ವಹಣಾ ನಿಯಮ’ (2022)’ ರೂಪಿಸಿದೆ. ಅದರ ಅನ್ವಯ, ಸೌರತ್ಯಾಜ್ಯ ಸಂಗ್ರಹ, ದಾಸ್ತಾನು, ವರ್ಗೀಕರಣ, ವಿಲೇವಾರಿ, ಸೂಕ್ತ ಸಂಸ್ಕರಣೆ ಎಲ್ಲವನ್ನೂ ಈ ಉಪಕರಣಗಳ ತಯಾರಕರು ಹಾಗೂ ಮಾರಾಟಗಾರರು ನಿರ್ವಹಿಸಬೇಕು. ಆದರೆ, ಈ ನಿಯಮಗಳು ಅನುಷ್ಠಾನವಾಗದೆ, ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಸುರಕ್ಷತೆಗೆ ಅಪಾಯ ಬಂದೊದಗಿದೆ. ಈ ಕಾರಣದಿಂದ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೌರತ್ಯಾಜ್ಯವನ್ನು ತ್ವರಿತವಾಗಿ ವಿಲೇವಾರಿ ಮಾಡುವ ಸೂಕ್ತ ಕಾರ್ಯತಂತ್ರಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕಿದೆ.

-ಕೇಶವ ಎಚ್.ಕೊರ್ಸೆ, ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.