ಈಗಿನ ಸಮಸ್ಯೆಗೆ ಒಂದೇ ಪರಿಹಾರ!

ಹಿಂದಿನ ಕಾಲದಲ್ಲಿ ರಾಜಮಹಾರಾಜರನ್ನು ಮುಗಿಸಲು ವಿಷಕನ್ಯೆಯರನ್ನು ಕಳುಹಿಸಲಾಗುತ್ತಿತ್ತಂತೆ. ಈಗ ಮಂತ್ರಿ ಮಹೋದಯರನ್ನು ಮಧುಬಲೆಯಲ್ಲಿ ಸಿಲುಕಿಸಿ ಮಣಿಸಲು ಮಧುಕನ್ಯೆಯರನ್ನು ಕಳುಹಿಸಲಾಗುತ್ತಿದೆಯಂತೆ! ಗುಟ್ಟಾಗಿ ಜೇನು ಕುಡಿದು ಕಟ್ಟಾಳಿನಂತಿದ್ದವರು, ರಟ್ಟಾದೊಡನೆ ಜೇನು ಕಡಿದಂತೆ ಒದ್ದಾಡುವುದು ತರವಲ್ಲ. ದೂರು, ತನಿಖೆಗಳೆಂಬ ತಾತ್ಕಾಲಿಕ ತಂತ್ರ ಹೊಸದಲ್ಲ. ‘ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ, ಛಲ ಬೇಕು ಶರಣಂಗೆ ಪರಸತಿಯನೊಲ್ಲೆನೆಂಬ...’ ಎಂಬ ಬಸವಣ್ಣನ ಮಾತೊಂದೇ ಪರಿಹಾರ ಈ ಸಮಸ್ಯೆಗಳಿಗೆಲ್ಲ.

-ಜೆ.ಬಿ.ಮಂಜುನಾಥ, ಪಾಂಡವಪುರ

ಸಾಹಿತ್ಯ ರಚನೆ ಮತ್ತು ಬೋಧನಾ ಸಾಮರ್ಥ್ಯ

ಭಾಷೆ ಮತ್ತು ಸಾಹಿತ್ಯದ ಬೋಧನೆಗೆ ಪದವಿಗಳು ನಿರ್ಣಾಯಕವಲ್ಲ ಎಂದು ಅಭಿಪ್ರಾಯಪಟ್ಟಿರುವ
ಬಾಲಸುಬ್ರಹ್ಮಣ್ಯ ಕಂಜರ್ಪಣೆ (ಸಂಗತ, ಮಾರ್ಚ್ 26), ಇದನ್ನು ಹಲವು ಉದಾಹರಣೆಗಳ ಸಹಿತ ವಿವರಿಸಿದ್ದಾರೆ. ಐಚ್ಛಿಕ ವಿಷಯವಾಗಿ ಸಾಹಿತ್ಯವನ್ನು ಅಧ್ಯಯನ ಮಾಡಿದವರೆಲ್ಲರೂ ಕವಿಗಳು, ಕತೆಗಾರರು, ಬರಹಗಾರರು ಆಗಿರುವುದಿಲ್ಲ ಅಥವಾ ಹೆಚ್ಚು ಆಳವಾಗಿ ಪುಸ್ತಕ, ಸಾಹಿತ್ಯ ಓದುವ ಹವ್ಯಾಸ ಉಳ್ಳವರಾಗಿರುವುದಿಲ್ಲ. ಕೆಲವರು ಐಚ್ಛಿಕ ವಿಷಯವಾಗಿ ಸಾಹಿತ್ಯವನ್ನು ಓದದೆ, ಬರೀ 10ನೇ ತರಗತಿ ಅಥವಾ ಅದಕ್ಕಿಂತ ಕಡಿಮೆ ಓದಿದ್ದರೂ ಮೇರು ಸಾಹಿತ್ಯವನ್ನು ರಚಿಸಬಲ್ಲವರಾಗಿರುತ್ತಾರೆ ಮತ್ತು ಹೆಚ್ಚು ಓದುವ ಹವ್ಯಾಸವುಳ್ಳವರೂ ಆಗಿರುತ್ತಾರೆ.

ಇದೆಲ್ಲಾ ಅವರವರ ಪ್ರತಿಭೆ ಹಾಗೂ ಆಸಕ್ತಿಗೆ ಸಂಬಂಧಿಸಿದ್ದಾಗಿರುತ್ತದೆ. ಆದರೆ ಬೋಧನೆಗೆ ಐಚ್ಛಿಕವಾಗಿ ವಿಷಯವನ್ನು ಓದಿದವರೇ ಬೇಕು. ಏಕೆಂದರೆ, ಕನ್ನಡ ಬೋಧನೆ ಮಾಡುವವರು ವರ್ಣಮಾಲೆ, ಒತ್ತಕ್ಷರ, ಅಕ್ಷರಗಳ ಹುಟ್ಟು, ಬೆಳವಣಿಗೆ, ಸಮಾಸ, ಸಂಧಿ, ಪದಗಳ ಅರ್ಥ, ಮೂಲ ಅಕ್ಷರದಂತಹ ಸಂಗತಿಗಳನ್ನು ನಿಖರವಾಗಿ ಹೇಳಬಲ್ಲರು. ಪದ್ಯ, ಲೇಖನ ಬರೆಯದಿದ್ದರೂ ಪಠ್ಯವನ್ನು ನಿಖರವಾಗಿ ತಿಳಿಸಬಲ್ಲರು. ಹೆರಿಗೆ ಮಾಡಿಸುವ ಡಾಕ್ಟರ್ ಹೃದಯ ಸಂಬಂಧಿ ರೋಗಕ್ಕೆ ನಿಖರವಾದ ಚಿಕಿತ್ಸೆ ನೀಡಲಾರರು. ತಕ್ಷಣಕ್ಕೆ ಆಸ್ಪತ್ರೆಗೆ ಹೋಗುವವರೆಗೂ ಉಸಿರಾಡುತ್ತಿರುವಂತೆ ಔಷಧ ನೀಡಬಲ್ಲರು, ಅಷ್ಟೇ.

-ಸರೋಜಾ ಎಂ.ಎಸ್., ಸಾಗರ

ಲೋಹಿಯಾವಾದದ ಪ್ರತಿಪಾದಕ ಚಂಪಾ

ಲೋಹಿಯಾ ಅವರು ವಿವಿಧ ಭಾಷೆಗಳ ಹಲವು ಲೇಖಕರಿಗೆ ಸ್ಫೂರ್ತಿಯಾಗಿದ್ದರು ಎಂದು ತಮ್ಮ ಲೇಖನದಲ್ಲಿ
(ಪ್ರ.ವಾ., ಮಾರ್ಚ್ 27) ಹೇಳಿರುವ ಯೋಗೇಂದ್ರ ಯಾದವ್, ಅಂತಹವರಲ್ಲಿ ಕನ್ನಡದ ಲೇಖಕರು ಎಂದು ಅನಂತಮೂರ್ತಿ, ತೇಜಸ್ವಿ, ಲಂಕೇಶ್ ಅವರನ್ನು ಹೆಸರಿಸಿದ್ದಾರೆ. ಇವರಷ್ಟೇ ಅಲ್ಲ ಕನ್ನಡದ ಕವಿ, ಹೋರಾಟಗಾರ, ಸಂಘಟಕರಾಗಿದ್ದ ಚಂದ್ರಶೇಖರ ಪಾಟೀಲ (ಚಂಪಾ) ಅವರೂ ಲೋಹಿಯಾವಾದದಿಂದ ಸ್ಫೂರ್ತಿ ಪಡೆದು ಅತ್ಯಂತ ಕ್ರಿಯಾಶೀಲರಾಗಿ ಇದ್ದವರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತಮ್ಮ ಕ್ರಿಯಾಶೀಲ ಬರಹದಿಂದಾಗಿ ಸೆರೆಮನೆವಾಸವನ್ನು ಅನುಭವಿಸಿದ್ದರು. ಬಂಡಾಯ ಸಾಹಿತ್ಯ ಸಂಘಟನೆಯ ಸಂದರ್ಭದಲ್ಲಿ ತಮ್ಮ ‘ಸಂಕ್ರಮಣ’ ಪತ್ರಿಕೆಯ ಒಂದು ಸಂಚಿಕೆಯನ್ನು ಲೋಹಿಯಾವಾದಕ್ಕೇ ಮೀಸಲಿರಿಸಿ (ಅತಿಥಿ ಸಂಪಾದಕ: ಡಿ.ಎಸ್.ನಾಗಭೂಷಣ) ರಾಜ್ಯದ ಅನೇಕ ಯುವ ಓದುಗರನ್ನು ಲೋಹಿಯಾವಾದದ ಕಡೆ ಸೆಳೆದರು. ಗೋಕಾಕ್ ವರದಿ ಜಾರಿಗಾಗಿ ಬೀದಿಗಿಳಿದು ಹೋರಾಡಿದ್ದರು. ಆದ್ದರಿಂದ ಲೋಹಿಯಾ ಅವರಿಂದ ಸ್ಫೂರ್ತಿ ಪಡೆದ ಕನ್ನಡದ ಅಗ್ರಗಣ್ಯ ಲೇಖಕರ ಯಾದಿಯಲ್ಲಿ ಮೊದಲು ಬರಬೇಕಾದ ಹೆಸರೇ ಚಂಪಾ ಅವರದು.

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಪ್ರಜ್ಞಾವಂತ ರಂಗವಲಯದ ಮುಂದೆ ಹಲವು ಪ್ರಶ್ನೆ

ವಿಶ್ವ ರಂಗಭೂಮಿ ದಿನಾಚರಣೆಯ (ಮಾರ್ಚ್ 27) ಈ ಸಂದರ್ಭದಲ್ಲಿ, ಗ್ರೀಕ್ನ ರಂಗಕರ್ಮಿ ಥಿಯೋಡರಸ್ ಟರ್ಝೋಪೌಲಸ್ ನೀಡಿರುವ ಹೇಳಿಕೆ ಗಮನಾರ್ಹ. ಸುದೀರ್ಘ ಸಂದೇಶದ ಮೂಲಕ ರಂಗಭೂಮಿಯ ಸಮಸ್ತರಿಗೂ ಅವರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ‘ರಾಜಕೀಯ, ಆರ್ಥಿಕ ಪರಿಣಾಮಗಳು, ಮಾಧ್ಯಮಗಳು ಮತ್ತು ಪೂರ್ವ ನಿರ್ಧರಿತವಾಗಿರುವಂತೆ ಅಭಿಪ್ರಾಯ ರೂಪಿಸಬಲ್ಲ ವ್ಯವಸ್ಥೆಗಳ ನಡುವೆ ಸಿಲುಕಿ ಹೈರಾಣ ಆಗುತ್ತಿರುವ 21ನೇ ಶತಮಾನದ ಜನರ ಬದುಕಿನ ಬಗ್ಗೆ ಈ ರಂಗಭೂಮಿ ನಿಜವಾಗಿಯೂ ಚಿಂತಿಸುತ್ತಿದೆಯೇ? ... ವಾಸ್ತವದ ನಿರಂತರವಾದ ನಕಾರಾತ್ಮಕ ಆಘಾತಗಳಿಂದ ರಕ್ತ ಬಸಿದು ಹೋಗುತ್ತಿದ್ದರೂ ಅದನ್ನು ಲೆಕ್ಕಿಸದೆ ಬಹುತ್ವದ ಸಹಬಾಳ್ವೆಯ ಕಲ್ಪನೆಯನ್ನು ಸದಾ ಸಾಕ್ಷಾತ್ಕಾರಗೊಳಿಸಲು ರಂಗಭೂಮಿಯು ಕಾರ್ಯತತ್ಪರ ಆಗಿದೆಯೇ?...’ ಹೀಗೆ ಅವರ ಸಂದೇಶದ ಉದ್ದಕ್ಕೂ ಹಲವಾರು ಪ್ರಶ್ನೆಗಳು ಗಮನ ಸೆಳೆಯುತ್ತವೆ.

ಪ್ರಸ್ತುತ ಎಲ್ಲೆಡೆ ಬಹಳ ಸಂಭ್ರಮದಿಂದ ರಂಗಭೂಮಿ ದಿನವನ್ನು ಆಚರಿಸುತ್ತಿದ್ದೇವೆ. ಆದರೆ, ಬಹುತ್ವದ ನೆಲೆಯಲ್ಲಿ ರಂಗ ಚಟುವಟಿಕೆಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಕ್ರಮೇಣ ಏಕ ಸಂಸ್ಕೃತಿಯತ್ತ ವಾಲುತ್ತಿರುವುದು, ಇತಿಹಾಸವನ್ನು ತಿರುಚಿ ಜನಸಮುದಾಯದ ಮನೋದ್ವೇಗದ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯು ತ್ತಿರುವುದು ರಂಗಭೂಮಿಯಲ್ಲಿನ ಆತಂಕಕಾರಿ ಬೆಳವಣಿಗೆ. ಹಾಗೆಯೇ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಶೋಷಣೆಗಳ ಬಗ್ಗೆ ದನಿ ಎತ್ತಬೇಕಾದ ರಂಗಭೂಮಿಯು ಮೌನ ವಹಿಸಿರುವುದಕ್ಕೆ ವ್ಯವಸ್ಥೆ ಯೊಂದಿಗಿನ ಹೊಂದಾಣಿಕೆ ಕಾರಣವಾಗಿರಬಹುದೇ? ಇದರ ಜೊತೆಗೆ ಇನ್ನೊಂದು ಆತಂಕಕಾರಿ ಸಂಗತಿ ಎಂದರೆ, ನಾಗರಿಕರು ಸಂವೇದನಾಶೀಲರು ಎನ್ನಿಸಿಕೊಳ್ಳುವ ಈ ವಲಯದಲ್ಲೂ ಸಹಕಲಾವಿದರೊಂದಿಗೆ ಅಸೂಕ್ಷ್ಮವಾಗಿ ನಡೆದುಕೊಂಡ ವದಂತಿಗಳು ಕಳವಳ ಹುಟ್ಟಿಸಿವೆ. ಇಂತಹ ವಿದ್ಯಮಾನಗಳ ಬಗ್ಗೆ ಪ್ರಜ್ಞಾವಂತ ರಂಗವಲಯ ತುರ್ತಾಗಿ ಯೋಚಿಸಬೇಕಾಗಿದೆ. ⇒

-ಶಶಿಧರ ಭಾರಿಘಾಟ್, ಬೆಂಗಳೂರು

ಪರ ಚಿಂತೆ?!

ವರದಿ ಹೇಳುತ್ತಿದೆ
ಸಂತೃಪ್ತ ಜೀವನ
ಭಾರತ ಹಿಂದೆ,
ಯಾಕಂತೆ?!
ಸದಾ ನಮಗೆ
ಪರ ಚಿಂತೆ...
ಅವರು ಮುಂದೆ,
ಇವರು ಮುಂದೆ...
ಅದಕ್ಕೇ ನಾವು ಹಿಂದೆ!

-ಮ.ಗು.ಬಸವಣ್ಣ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.