ಬೆಂಗಳೂರಿನ ‘ನಮ್ಮ ಮೆಟ್ರೊ’ಗೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕು ಎನ್ನುವ ಬೇಡಿಕೆ ಕೇಳಬರುತ್ತಿದೆ. ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕೂಡಾ ಕೆಂಪೇಗೌಡರ ಹೆಸರಿಡಬೇಕು ಎನ್ನುವ ಕೂಗೂ ಎದ್ದಿದೆ. ಈ ಕೋರಿಕೆಯಲ್ಲಿ ಅರ್ಥವಿದೆ.

ಆದರೆ, ಅವರ ಹೆಸರನ್ನು ಈಗಾಗಲೇ ಬೆಂಗಳೂರು ಇಂಟರ್ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಇಟ್ಟು ಗೌರವ ಸಲ್ಲಿಸಲಾಗಿದೆ. ಬಹಳಷ್ಟು ಸಾಧಕರು ಇರುವ ರಾಜ್ಯದಲ್ಲಿ ಕೇವಲ ಒಬ್ಬಿಬ್ಬರ ಹೆಸರನ್ನೇ ಪರಿಗಣಿಸದೆ ನಾಡು, ನುಡಿ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಿದ ಪ್ರತಿಯೊಬ್ಬ ಸಾಧಕರನ್ನು ಮತ್ತು ಮಹನೀಯರನ್ನು ಗುರುತಿಸಿ ಗೌರವಿಸಬೇಕು.

ಈ ಪ್ರಕ್ರಿಯೆ ಕೆಂಪೇಗೌಡ, ಅಂಬೇಡ್ಕರ್, ಮಹಾತ್ಮ ಗಾಂಧಿ, ಇಂದಿರಾ ಕುಟುಂಬ, ಕಿತ್ತೂರು ಚೆನ್ನಮ್ಮ, ಬಸವೇಶ್ವರರಿಗೆ ಸೀಮಿತವಾಗಬಾರದು. ವಿಶ್ವೇಶ್ವರಯ್ಯ, ರಾಜಾರಾಮಣ್ಣ, ಸಿ.ವಿ. ರಾಮನ್, ರಾಮಕೃಷ್ಣ ಹೆಗಡೆ, ಎಸ್.ಎಂ, ಕೃಷ್ಣ, ದೇವರಾಜ ಅರಸು, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಮತ್ತು ಮೆಟ್ರೊ ಕನಸುಗಾರ ಶಂಕರನಾಗ್, ವರನಟ ರಾಜ್ಕುಮಾರ್... ಒಳಗೊಂಡಂತೆ ಎಲ್ಲ ಮಹನೀಯರೂ ಪರಿಗಣನೆಗೆ ಒಳಗಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.