ಬಳ್ಳಾರಿ ಬಿಸಿಲು, ರಾಜಕೀಯ ವೈಷಮ್ಯವೂ

ಬಳ್ಳಾರಿಯಲ್ಲಿ ಎರಡೇ ಕಾಲ: ಒಂದು ಬೇಸಿಗೆ, ಮತ್ತೊಂದು ಬಿರುಬೇಸಿಗೆ ಎಂದು ಬೀಚಿ ಹೇಳಿದ್ದರು. ಬಾಚಿಗೊಂಡನಹಳ್ಳಿ ಚನ್ನಬಸವನಗೌಡ, ಎಂ.ವೈ. ಘೋರ್ಪಡೆ, ಎಂ.ಪಿ. ಪ್ರಕಾಶ್ ಅವರಂಥ ರಾಜಕಾರಣಿಗಳ ಹೆಸರು ಬಳ್ಳಾರಿಯ ನೆನಪುಗಳೊಂದಿಗೆ ಮರುಕಳಿಸುವ ಬಿಂಬಗಳು. ಘೋರ್ಪಡೆಯವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ತರುವ ಉದ್ದೇಶದಿಂದ ಮಸೂದೆ ತರಲು ಬಯಸಿದ್ದರು. ಅಂದಿನ ಸಂಪುಟ ಸಭೆಯು ಅದಕ್ಕೆ ಒಪ್ಪಿಗೆ ಸೂಚಿಸದ ಕಾರಣ ಅಲ್ಲಿಯೇ ರಾಜೀನಾಮೆ ಕೊಟ್ಟು ಸ್ವಂತ ಕಾರಿನಲ್ಲಿ ಸಂಡೂರಿಗೆ ಹಿಂದಿರುಗಿದ್ದರು.

ಎಂ.ಪಿ. ಪ್ರಕಾಶ್ ಗೃಹ ಸಚಿವರಾಗಿದ್ದಾಗ ಅವರ ಪುತ್ರನ ಹೆಸರು ಅಕ್ರಮ ಗಣಿಗಾರಿಕೆಯಲ್ಲಿ ತಳಕು ಹಾಕಿಕೊಂಡಿದೆ ಎನ್ನುವ ಸಣ್ಣ ಆರೋಪವನ್ನು ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ ಪತ್ರಕರ್ತರೊಬ್ಬರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದರು. ಅದರಿಂದ ಮೂರು ದಿನದವರೆಗೆ ಸರ್ಕಾರಿ ವಸತಿಗೃಹದಿಂದ ಪ್ರಕಾಶ್ ಅವರು ಹೊರಬಂದಿರಲಿಲ್ಲ. ಇಂಥ ಬಳ್ಳಾರಿ ಇಂದು ರಾಜಕೀಯ ವೈಷಮ್ಯದ ನೆಲೆವೀಡಾಗುತ್ತಿರುವುದು ದುರದೃಷ್ಟಕರ.

⇒ಸಿರಿಗೇರಿ ಯರಿಸ್ವಾಮಿ, ಸಿರುಗುಪ್ಪ

ಅತಿಥಿ ಉಪನ್ಯಾಸಕರಿಗೆ ಇಡುಗಂಟು ಲಭ್ಯ

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ 49 ಅತಿಥಿ ಉಪನ್ಯಾಸಕರಿಗೆ ಕಳೆದ ವಾರ ₹5 ಲಕ್ಷ ಇಡುಗಂಟು ಬಿಡುಗಡೆಯಾಗಿದೆ. ಆ ಮೂಲಕ ಸರ್ಕಾರ ಬಡವರ ಪರವಾದ ತನ್ನ ಬದ್ಧತೆ ಪ್ರದರ್ಶಿಸಿದೆ. ಅಕಾಲಿಕ ಮರಣ ಹೊಂದಿದ ಉಪನ್ಯಾಸಕರ ಕುಟುಂಬಕ್ಕೆ ಹಾಗೂ ನಿವೃತ್ತಿಯಾದವರಿಗೆ ಇದು ದೊಡ್ಡಮಟ್ಟದ ಆಸರೆಯಾಗಲಿದೆ.

ಮತ್ತೊಂದೆಡೆ, ಕಳೆದ ಎರಡು ದಶಕಗಳಿಂದ ಕಡಿಮೆ ವೇತನಕ್ಕೆ ದುಡಿದ ಅತಿಥಿ ಉಪನ್ಯಾಸಕರನ್ನು ಯುಜಿಸಿ ಅರ್ಹತೆ ಇಲ್ಲವೆಂಬ ಕಾರಣಕ್ಕೆ ಕೈಬಿಟ್ಟಿರುವುದು ನೋವಿನ ಸಂಗತಿ. ಮಾನವೀಯತೆ ದೃಷ್ಟಿಯಿಂದ ಅವರಿಗೆ ಬೋಧಿಸಲು ಮತ್ತೆ ಅವಕಾಶ ಕಲ್ಪಿಸಿದರೆ, ಬಡವರು ಮತ್ತು ಹಸಿದವರ ಪರವಾದ ಸರ್ಕಾರದ ನಿಲುವಿಗೆ ಮತ್ತಷ್ಟು ಮೆರುಗು ಬರುತ್ತದೆ.

⇒ಹೊನ್ನಪ್ಪ ಹೊನ್ನಪ್ಪನವರ, ಹಾವೇರಿ
ಗ್ರಾಮ ಸ್ವರಾಜ್ಯದ ಕನಸಿಗೆ ಕೊಡಲಿ ಪೆಟ್ಟು

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿಯೇ ತೇಲುತ್ತಿದೆ. ಆ ಮೂಲಕ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯನ್ನು ಮರೆತಂತಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ 15ನೆಯ ಹಣಕಾಸಿನ ಆಯೋಗ ನೀಡಬೇಕಿದ್ದ ಹಣವು ಪಂಚಾಯಿತಿಗಳಿಗೆ ಇನ್ನೂ ಬಿಡುಗಡೆಯಾಗಿಲ್ಲ. ಇದರಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಲಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸಿಗೆ ಕೊಡಲಿ ಪೆಟ್ಟು ಬೀಳಲಿದೆ.

⇒ಪ್ರಭು ವಂದಾಲಿ, ರಾಯಚೂರು
ಸಂಗೀತ, ನೃತ್ಯ ಪರೀಕ್ಷೆ: ಸುಧಾರಣೆ ಅಗತ್ಯ

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ
ಕಲೆಗಳ ವಿಶ್ವವಿದ್ಯಾಲಯದಿಂದ ಮೂರನೇ ವರ್ಷದ ಸಂಗೀತ ಮತ್ತು ನೃತ್ಯ ಪರೀಕ್ಷೆ
ಗಳಿಗೆ ಸಿದ್ಧತೆ ನಡೆಯುತ್ತಿದೆ. ಮುಂದಿನ ಪರೀಕ್ಷೆಗಳನ್ನು ನಡೆಸುವಾಗ ಎರಡು
ವಿಷಯಗಳನ್ನು ಅಗತ್ಯವಾಗಿ ಪರಾಮರ್ಶಿಸಬೇಕಿದೆ. ಸಿಲೆಬಸ್ ನೀಡಿರುವುದಕ್ಕೆ ಸರಿಯಾದ ಪಠ್ಯಪುಸ್ತಕ ಒದಗಿಸುವುದು ಅಥವಾ ಪರಾಮರ್ಶನ ಪುಸ್ತಕ
ಗಳನ್ನಾದರೂ ಸೂಚಿಸಿದರೆ ಅನುಕೂಲವಾದೀತು. ಪರೀಕ್ಷೆಗಳನ್ನು ಒಂದೇ ದಿನಕ್ಕೆ ಸೀಮಿತಗೊಳಿಸದೆ ಮೂರು ದಿನಗಳಿಗಾದರೂ ವಿಸ್ತರಿಸಬೇಕು. ಹಲವಾರು ವಿದ್ಯಾರ್ಥಿಗಳನ್ನು ಪರೀಕ್ಷೆ ಕಟ್ಟಿಸುವ ನೃತ್ಯಗುರುಗಳಿಗೆ ಸಮಯ ಹೊಂದಿಸಿಕೊಂಡು ನಟುವಾಂಗ ಮಾಡುವುದು ತುಂಬ ಕಷ್ಟಕರ.

ನಟುವಾಂಗದವರನ್ನು ತಯಾರಿಗೊಳಿಸಿ ಅನ್ನುವ ವಿಶ್ವವಿದ್ಯಾಲಯದ ಹೇಳಿಕೆ
ಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವುದು ಸಾಧ್ಯವೇ? ನೃತ್ಯ ಪರೀಕ್ಷಕರನ್ನು ಒಂದು ಬೋರ್ಡ್ಗೆ ಇಬ್ಬರನ್ನು ನೇಮಿಸಬೇಕು. ಪರೀಕ್ಷಾಂಗ ವಿಭಾಗದವರು ಈ ಬಗ್ಗೆ ಗಮನಹರಿಸಬೇಕಿದೆ. ಪರೀಕ್ಷೆಯನ್ನು ಸುಧಾರಿಸಿದರೆ ನೃತ್ಯ, ಸಂಗೀತ ಕಲಿಯುವವರು ಇನ್ನಷ್ಟು ಹೆಚ್ಚಾಗಲಿದ್ದಾರೆ.

⇒ಮಂಜುಳಾ ಸುಬ್ರಹ್ಮಣ್ಯ, ಪುತ್ತೂರು

ಹಂಪಿ ಸೌಂದರ್ಯ, ಪರಂಪರೆ ಉಳಿಸೋಣ

ಹಂಪಿಯ ಸೌಂದರ್ಯ ಅದರ ನೈಸರ್ಗಿಕ ಪರಿಸರದಲ್ಲಿ ಅಡಗಿದೆ. ಆದರೆ, ಪ್ರವಾಸಿ
ಗರ ಸಂಖ್ಯೆ ಹೆಚ್ಚಿದಂತೆ ಶಿಲ್ಪಗಳಿಗೆ ಮತ್ತು ಪರಿಸರಕ್ಕೆ ಹಾನಿಯಾಗುವ ಆತಂಕ ಹೆಚ್ಚುತ್ತಿದೆ. ಇಲ್ಲಿ ಸುಸ್ಥಿರ ಪ್ರವಾಸೋದ್ಯಮದ ಅವಶ್ಯಕತೆ ಹೆಚ್ಚಿದೆ. ಡಿಜಿಟಲ್ ಟಿಕೆಟ್ ವ್ಯವಸ್ಥೆ, ಪ್ರವಾಸಿಗರ ಸಂಖ್ಯೆ ನಿಯಂತ್ರಿಸುವ ತಂತ್ರಜ್ಞಾನ, ಮತ್ತು ನಿರಂತರ ನಿಗಾ ವ್ಯವಸ್ಥೆಯು ಹಂಪಿಯ ಸಂರಕ್ಷಣೆಗೆ ನೆರವಾಗಲಿದೆ. ಅಭಿವೃದ್ಧಿ ಮತ್ತು ಸಂರಕ್ಷಣೆ ಒಂದೇ ನಾಣ್ಯದ ಎರಡು ಮುಖಗಳು. ಸರ್ಕಾರ ಈ ಸತ್ಯವನ್ನು ಅರಿತರಷ್ಟೇ ಹಂಪಿಯ ಸೌಂದರ್ಯ ಹಾಗೂ ಪರಂಪರೆಯ ಉಳಿವು ಸಾಧ್ಯ.

⇒ವಿ. ಅರ್ಜುನ್, ವಿಜಯನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.