ಇಂಗ್ಲಿಷ್ನಲ್ಲಿ also ran ಎಂಬ ಒಂದು ಪದಪುಂಜ ಇದೆ. ನಾನೂ ಓಡಿದೆ ಎಂದು ಹೇಳಿಕೊಳ್ಳುವ ಸ್ಪರ್ಧಿ ಗೆಲ್ಲದವ, ಮಹತ್ವ ಇಲ್ಲದವ. ರಾಜ್ಯದಲ್ಲಿ ಈ ಬಾರಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಪಡೆದ ಮತಸಂಖ್ಯೆಯನ್ನು ನೋಡಿದರೆ, ಶಿರಾದಲ್ಲಿ ಮೊದಲ ಅರ್ಥ, ರಾಜರಾಜೇಶ್ವರಿ ನಗರದಲ್ಲಿ ಎರಡನೆಯ ಅರ್ಥ ಬರುತ್ತದೆ. ತಾವು ಪ್ರಚಾರಕ್ಕೆ ಹೋಗಿದ್ದು ‘ಪಕ್ಷವಾಗಿ ನಾವು ಇನ್ನೂ ಇದ್ದೇವೆ’ ಎಂದು ಪ್ರದರ್ಶಿಸಲಷ್ಟೆಯೇ ಎಂಬುದಕ್ಕೆ ರಾಜ್ಯಸಭಾ ಸದಸ್ಯ ದೇವೇಗೌಡರು ಉತ್ತರ ಹೇಳಬೇಕು. ಇನ್ನು ಎಚ್.ಡಿ.ಕುಮಾರಸ್ವಾಮಿ ಅವರ ಉದ್ದೇಶ, ವೈಯಕ್ತಿಕವಾಗಿ ಇನ್ನೂ ಚಲಾವಣೆಯಲ್ಲಿ ಇದ್ದೇನೆ ಎಂದು ತೋರಿಸಿಕೊಳ್ಳುವುದೇ?

ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಿ ಸ್ಪರ್ಧಿಸಿದಾಗಲೂ ಅವುಗಳ ಮತಗಳು ಪರಸ್ಪರ ವರ್ಗಾವಣೆ ಆಗುತ್ತಿರಲಿಲ್ಲ ಎಂಬುದು ನಿಜವಾದರೂ ಹೆಚ್ಚು ಗೆಲ್ಲುವ ಸಾಮರ್ಥ್ಯ ಇರುವ ಒಬ್ಬ ಅಭ್ಯರ್ಥಿ ಕಣದಲ್ಲಿ ಉಳಿದಿದ್ದರೆ, ಬಿಜೆಪಿಗೆ ಗೆಲ್ಲುವುದು ಇಷ್ಟು ಸುಲಭವಾಗುತ್ತಿರಲಿಲ್ಲ. ಪ್ರತಿಷ್ಠೆಗಾಗಿ ಪ್ರತ್ಯೇಕ ಸ್ಪರ್ಧೆ ಮಾಡಿ ಎರಡೂ ಪಕ್ಷಗಳು ಸಾಧಿಸಿದ್ದೇನು?

–ಎಚ್.ಎಸ್.ಮಂಜುನಾಥ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.