ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸರ್ಕಾರದ ಆದರಣೀಯ ಕಾರ್ಯ

Last Updated 14 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವಾದ ಜನವರಿ 3ರಂದು ಪ್ರತಿವರ್ಷ ‘ಸಾವಿತ್ರಿ ಉತ್ಸವ’ ಹಮ್ಮಿಕೊಳ್ಳುವ ಮಹಾರಾಷ್ಟ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ಧಾರ ಸ್ವಾಗತಾರ್ಹ. ಭಾರತದ ಅಂದಿನ ಪರಿಸ್ಥಿತಿ ಹೆಣ್ಣುಮಕ್ಕಳ ವಿಚಾರದಲ್ಲಿ ತುಂಬಾ ಕಠಿಣವಾಗಿತ್ತು. ಮಹಿಳೆಯೊಬ್ಬಳು ಶಿಕ್ಷಕಿ ಆಗುವುದೆಂದರೆ, ಧರ್ಮ ಮತ್ತು ಸಮಾಜಕ್ಕೆ ದ್ರೋಹ ಬಗೆದಂತೆ ಎಂದು ಭಾವಿಸಿದ್ದ ಕಾಲ ಅದು. ಆದರೂ ಯಾವ ಪ್ರತಿರೋಧಕ್ಕೂ ಅಂಜದೆ, ಸ್ತ್ರೀಯರು ಕೂಡ ಪುರುಷರಂತೆ ಸಮಾನವಾದ ರೀತಿಯಲ್ಲಿ ಶಿಕ್ಷಣ ಪಡೆಯಬೇಕೆಂದು ನಂಬಿ, ಮಹಿಳೆಯರ ಶಿಕ್ಷಣಕ್ಕೆ ದಾರಿದೀಪ ಆದವರು ಸಾವಿತ್ರಿಬಾಯಿ.

ಬಾಲ್ಯವಿವಾಹ, ಸತಿ ಪದ್ಧತಿ, ಕೇಶ ಮುಂಡನದಂತಹ ಭಾರತೀಯ ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಪತಿಯ ಜೊತೆಗೂಡಿ ಹೋರಾಡಿದ ಕೀರ್ತಿ ಅವರದು. ಅಂತಹವರನ್ನು ಸ್ಮರಿಸುವ ಕಾರ್ಯ ಆದರಣೀಯ.

–ಭೀಮಾಶಂಕರ ದಾದೆಲಿ ಹಳಿಸಗರ, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT