ಅಂತ್ಯಕ್ರಿಯೆಗೆ ಪರಿಶಿಷ್ಟರು ಪರದಾಡುವ ಸ್ಥಿತಿಗೆ (ಪ್ರ.ವಾ., ಸೆ. 10) ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ಸೀಮಿತವಾಗಿರುವ ಸ್ಮಶಾನಗಳು ಕಾರಣ. ಬದುಕಿನುದ್ದಕ್ಕೂ ಬೆನ್ನುಹತ್ತುವ ಜಾತಿ ಎಂಬ ಭೂತದಿಂದ ಶವಸಂಸ್ಕಾರಕ್ಕೆ ಅಡ್ಡಿಪಡಿಸುವ ಘಟನೆಗಳು ನಿಜಕ್ಕೂ ಅಮಾನವೀಯ. ತುಳಿತಕ್ಕೊಳಗಾದ ಬಹುತೇಕ ಸಮುದಾಯಗಳಿಗೆ ಈಗಲೂ ಉಳುಮೆಗೆ ಭೂಮಿ ಇಲ್ಲ, ಕನಿಷ್ಠ ಶವ ಹೂಳುವುದಕ್ಕಾದರೂ ಭೂಮಿ ನೀಡಿ, ಮೃತರಿಗೆ ಗೌರವಯುತ ವಿದಾಯ ಹೇಳಲು ಅನುವಾಗುವಂತೆ ಎಲ್ಲ ಜಾತಿ–ವರ್ಗಗಳೂ ಒಂದೇ ಕಡೆ ಅಂತ್ಯಸಂಸ್ಕಾರ ನೆರವೇರಿಸಲು ಅವಕಾಶ ವಾಗುವಂತೆ ಸಾಮಾನ್ಯ ಸ್ಮಶಾನಗಳನ್ನು ಸ್ಥಾಪಿಸಬೇಕು. ಇದು ಜಾತಿ ಆಧಾರಿತ ತಾರತಮ್ಯ ನಿರ್ಮೂಲನೆಯ ದಿಸೆಯಲ್ಲೂ ಒಂದು ದೃಢ ಹೆಜ್ಜೆಯಾಗಿದೆ.
- ಪ್ರವೀಣ ನಾಗಪ್ಪ ಯಲವಿಗಿ,ಹಾವೇರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.