ಮಂಗಳವಾರ, ಮೇ 24, 2022
31 °C

ಹಿರಿಯ ನಾಗರಿಕರು ಆತ್ಮನಿರ್ಭರರಾಗಲು...

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಿಸಿರುವುದು ಸ್ವಾಗತಾರ್ಹ. ದೇಶದಲ್ಲಿ ಬಹಳಷ್ಟು ಹಿರಿಯ ನಾಗರಿಕರು ಸಾರ್ವಜನಿಕ, ಖಾಸಗಿ ಹಾಗೂ ಸ್ವಯಂಸೇವಾ ಸಂಸ್ಥೆಗಳಿಂದ ನಿವೃತ್ತಿ ಹೊಂದಿದ್ದು, ಪಿಂಚಣಿಗೆ ಅರ್ಹರಾಗಿಲ್ಲ. ಅವರು ತಮ್ಮ ಜೀವನಕ್ಕೆ ಅಂಚೆಕಚೇರಿ, ಬ್ಯಾಂಕ್ ಹಾಗೂ ಭಾರತೀಯ ಜೀವ ವಿಮಾ ನಿಗಮದ ಹಿರಿಯ ನಾಗರಿಕರ ಠೇವಣಿಯ ಬಡ್ಡಿಯನ್ನು ನಂಬಿದ್ದಾರೆ.

ಆರೋಗ್ಯ ಸೇವೆ ಒಳಗೊಂಡು ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಹಣದುಬ್ಬರದ ಕಾಲಘಟ್ಟದಲ್ಲಿ, ಈ ಠೇವಣಿಗಳ ಮೇಲಿನ ಬಡ್ಡಿ ದರವನ್ನೂ ಹೆಚ್ಚಿಸಿದರೆ, ಇಳಿ ವಯಸ್ಸಿನಲ್ಲಿ ಬಹುತೇಕ ಹಿರಿಯ ನಾಗರಿಕರು ಆತ್ಮನಿರ್ಭರರಾಗಿ ಗೌರವಾನ್ವಿತ ಬದುಕು ಸಾಗಿಸಲು ಅನುಕೂಲವಾಗುತ್ತದೆ.

- ದೀಪಾ ಶ್ರೀವತ್ಸ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು