ಭಾನುವಾರ, ಸೆಪ್ಟೆಂಬರ್ 19, 2021
25 °C

 ಮರೆಯಾಗದ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್ 14, ಶಾಂತವೇರಿ ಗೋಪಾಲಗೌಡರ ಜನ್ಮ ದಿನ. ಭ್ರಷ್ಟ ವ್ಯವಸ್ಥೆಯಲ್ಲಿ ದೇಶ ನರಳುವಂತಹ ಸ್ಥಿತಿಗೆ ದೂಡಿದ ರಾಜಕೀಯ ವ್ಯವಸ್ಥೆಯ ಈ ಕಾಲದಲ್ಲಿ ಗೋಪಾಲ ಗೌಡರ ಮೇರು ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವುದು ಅಗತ್ಯ. ಸಾಗರ ತಾಲ್ಲೂಕಿನ ಮೊದಲ ಶಾಸಕ ಎನ್ನುವ ಹೆಮ್ಮೆ ಸಾಗರದವರಿಗೆ. ಐತಿಹಾಸಿಕ ಕಾಗೋಡು ಚಳವಳಿಗೆ ಸೈದ್ಧಾಂತಿಕ ನೆಲಗಟ್ಟು, ನಾಯಕತ್ವ ಕೊಟ್ಟವರು.

ವೀರೇಂದ್ರ ಪಾಟೀಲ್ ನೇತೃತ್ವದ ಸರ್ಕಾರವು ಗೋಪಾಲಗೌಡರಿಗೆ ಬೆಂಗಳೂರಿನಲ್ಲಿ ಉಚಿತವಾಗಿ ಉತ್ತಮ ನಿವೇಶನ ನೀಡಿದಾಗ, ‘ರಾಜ್ಯದ ಎಲ್ಲ ನಿವೇಶನ ರಹಿತರಿಗೆ ನಿವೇಶನ ನೀಡಿದ ನಂತರ ನನಗೆ ನೀಡಿ’ ಎಂದು ಹೇಳಿ, ಈ ಕೊಡುಗೆಯನ್ನು ನಯವಾಗಿ ತಿರಸ್ಕರಿ ಸಿದ್ದು ಇತಿಹಾಸ. ಇತ್ತೀಚೆಗೆ ಒಬ್ಬ ಶಾಸಕರು ತನಗೆ ನಿವೇಶನ ಕೊಡಲು ಸರ್ಕಾರವನ್ನು ಒತ್ತಾಯಿಸಿ ಧರಣಿ ಕೂರುವ ಬೆದರಿಕೆ ಹಾಕಿದ್ದರು. ಗೋಪಾಲಗೌಡರ ಪ್ರಾಮಾಣಿಕತೆ, ಜನಪರ ಕಾಳಜಿ, ಸೈದ್ಧಾಂತಿಕ ಬದ್ಧತೆ ಈಗ ಯಾರಲ್ಲೂ ಕಾಣುತ್ತಿಲ್ಲ. ಅನೇಕ ಶಾಸಕರು, ಮಂತ್ರಿ, ಮುಖ್ಯಮಂತ್ರಿಗಳು ಜನಮನದಿಂದ ಮರೆಯಾಗಿದ್ದಾರೆ. ಗೋಪಾಲಗೌಡರು ಜೀವಂತವಾಗಿದ್ದಾರೆ.

-ಬಿ.ಆರ್.ಜಯಂತ್, ಸಾಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು