ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಾಂತರ: ನಂಬಿಕೆದ್ರೋಹ ತರವಲ್ಲ

Last Updated 30 ಜೂನ್ 2022, 19:30 IST
ಅಕ್ಷರ ಗಾತ್ರ

ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ಬಿಗಿಗೊಳಿಸಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದಾರೆ. ಬಲಿಷ್ಠ ಆಡಳಿತ ಪಕ್ಷವು ಪ್ರಾದೇಶಿಕ ಪಕ್ಷಗಳನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ನಿರ್ಮೂಲನೆ ಮಾಡಲು ಹಟ ತೊಟ್ಟಂತೆ ಪರೋಕ್ಷವಾಗಿ ಆಪರೇಷನ್ ಕಮಲ ಮಾಡಹೊರಟಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮುಂದೊಂದು ದಿನ ತನಗೇ ಇದು ತಿರುಗುಬಾಣ ಆಗಬಹುದು.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಮುಂದಿನ ಭೀಕರತೆಯನ್ನು ತೋರಿಸುತ್ತಿವೆ. ಒಂದು ಪಕ್ಷದಿಂದ ಆರಿಸಿಬಂದ ಜನಪ್ರತಿನಿಧಿಯು ಪಕ್ಷನಿಷ್ಠೆ ಮರೆತು ಅಧಿಕಾರದಾಹಕ್ಕಾಗಿ ಇನ್ನೊಂದು ಪಕ್ಷಕ್ಕೆ ಹಾರುವುದನ್ನು ತಪ್ಪಿಸಬೇಕು. ಚುನಾವಣೆಗೆ ಮೊದಲು ಪಕ್ಷ ತೊರೆಯಲಿ, ಆದರೆ ಗೆದ್ದ ನಂತರ ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನರಿಗೆ, ಪಕ್ಷಕ್ಕೆ ನಂಬಿಕೆದ್ರೋಹ ಮಾಡುವುದು ಉಚಿತವಲ್ಲ.

-ಮಲ್ಲತ್ತಹಳ್ಳಿ ಡಾ.ಎಚ್.ತುಕಾರಾಂ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT