ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಟ್ಟಿ ದನಿ ಹೊರಡಲಿ

Last Updated 12 ಸೆಪ್ಟೆಂಬರ್ 2018, 20:00 IST
ಅಕ್ಷರ ಗಾತ್ರ

‘ಧರ್ಮ– ಜಾತಿಗಳ ಆಧಾರದಲ್ಲೇ ಜನರು ಮತ ಚಲಾಯಿಸುತ್ತಿರುವಾಗ, ಭಾರತ್‌ ಬಂದ್‌ನಿಂದ ಸಾಧಿಸುವುದಾದರೂ ಏನನ್ನು’ ಎಂದು ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಎತ್ತಿರುವ ಪ್ರಶ್ನೆ (ಪ್ರ.ವಾ., ದಿನದ ಟ್ವೀಟ್‌, ಸೆ. 11) ನಮ್ಮನ್ನು ಯೋಚಿಸುವಂತೆ ಮಾಡಬೇಕಿದೆ. ಜಾತಿಧರ್ಮದಷ್ಟೇ ಹಣದ ಆಮಿಷವೂ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದೊಂದು ವಿಷವರ್ತುಲ. ಇದನ್ನು ನಿವಾರಿಸಲು ಅಣ್ಣಾ ಹಜಾರೆ, ಸಂತೋಷ ಹೆಗ್ಡೆ ಅಂಥವರು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೂ ನಿರೀಕ್ಷಿತ ಫಲ ದೊರೆತಿಲ್ಲ ಎಂಬುದು ವಿಷಾದದ ಸಂಗತಿ.

ಹಣದ ಪ್ರಭಾವ ಚುನಾವಣೆಯಿಂದ ಚುನಾವಣೆಗೆ ಹೆಚ್ಚಾಗುತ್ತಲೇ ಇದೆ. ಇದು ಎಲ್ಲರೂ ಕಾಣಬಹುದಾದ ಸತ್ಯ. ಮತ ಯಾಚನೆಗೆ ಬರುವವರನ್ನು ಜನಸಾಮಾನ್ಯರು ನೇರವಾಗಿ ಹಣ ಕೇಳುವ ಪರಿಪಾಟ ಶುರುವಾಗಿದೆ. ರಾಜಕೀಯ ವ್ಯವಸ್ಥೆಯು ತಾನು ಭ್ರಷ್ಟಗೊಳ್ಳುವುದಲ್ಲದೇ ಇಡೀ ಸಮಾಜವನ್ನೇ ಭ್ರಷ್ಟವನ್ನಾಗಿಸುತ್ತಿದೆ. ಇದನ್ನು ಹೋಗಲಾಡಿಸಲು ಎಲ್ಲ ವಲಯಗಳಿಂದಲೂ ಗಟ್ಟಿ ಧ್ವನಿ ಹೊರಡಬೇಕು.

ಕಸ್ತೂರಿ ರ. ದೊಡ್ಡಮೇಟಿ,ಜಕ್ಕಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT