ಶುಕ್ರವಾರ, ಫೆಬ್ರವರಿ 26, 2021
31 °C

ಸಬ್ಸಿಡಿ ಸ್ಥಗಿತ ಸ್ವಾಗತಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸತ್ ಕ್ಯಾಂಟೀನ್‌ಗಳಲ್ಲಿ ಸಂಸದರಿಗೆ ಮತ್ತು ಇತರರಿಗೆ ನೀಡುತ್ತಿದ್ದ ಆಹಾರಗಳ ಮೇಲಿನ ಸಬ್ಸಿಡಿಯನ್ನು
ಸ್ಥಗಿತಗೊಳಿಸಿರುವುದು (ಪ್ರ.ವಾ., ಜ. 19) ಸ್ವಾಗತಾರ್ಹ.

ಬೆರಳೆಣಿಕೆಯಷ್ಟು ಸಂಸದರನ್ನು ಹೊರತುಪಡಿಸಿದರೆ ಎಲ್ಲರೂ ಕೋಟ್ಯಧೀಶರೇ ಆಗಿದ್ದಾರೆ. ಅಂತಹವರಿಗೆ ಈ ರೀತಿಯ ಸಬ್ಸಿಡಿಗಳ ಅಗತ್ಯವೇ ಇಲ್ಲ. ಕೇವಲ ಇದೊಂದೇ ಅಲ್ಲದೆ ಕಾರು, ಪೆಟ್ರೋಲ್, ಪ್ರವಾಸ ಭತ್ಯೆ ಸೇರಿದಂತೆ ಹಲವು ಸವಲತ್ತುಗಳನ್ನು ಅವರು ಹೊಂದಿದ್ದಾರೆ. ಅವುಗಳಲ್ಲಿ ಕೆಲವು ಮಾನ್ಯವಾದರೂ ಅನೇಕವು ಅರ್ಥಹೀನ ಅಥವಾ ಅನಗತ್ಯ ಎನಿಸುತ್ತದೆ. ಇಂತಹವಕ್ಕೆ ಕಡಿವಾಣ ಹಾಕಿ, ಅದೇ ಹಣವನ್ನು ಅಭಿವೃದ್ಧಿಗೋ ಅಥವಾ ಕಡುಬಡವರ ಏಳಿಗೆಗೋ ಬಳಸಿದರೆ ತೆರಿಗೆ ಕಟ್ಟಿದವರಿಗೆ ನೆಮ್ಮದಿಯ ಭಾವ ಮೂಡಬಹುದು.

ಜನಪ್ರತಿನಿಧಿಗಳಿಗೆ ಇಂತಹ ಅನಗತ್ಯ ಸವಲತ್ತುಗಳು ಕೇಂದ್ರದಲ್ಲಿ ಮಾತ್ರವೇ ಅಲ್ಲದೆ ರಾಜ್ಯಗಳಲ್ಲೂ ಇವೆ. ಇನ್ನು ಮುಂದಾದರೂ ಸರ್ಕಾರಗಳು ತೆರಿಗೆ ಹಣ ಹೀಗೆ ಪೋಲಾಗುವುದನ್ನು ತಪ್ಪಿಸಲಿ. ಕೇಂದ್ರದ ಈ ರೀತಿಯ ಕ್ರಮ ಸ್ವಾಗತಾರ್ಹ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು