ಡಾ. ಬಿ.ಆರ್.ಅಂಬೇಡ್ಕರ್ ಅವರ ಜೀವನಗಾಥೆಯನ್ನು ಒಳಗೊಂಡ ‘ಮಹಾನಾಯಕ’ ಧಾರಾವಾಹಿಯ ಪ್ರಸಾರ ನಿಲ್ಲಿಸುವಂತೆ ತಮಗೆ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಜೀ ವಾಹಿನಿಯ ಬ್ಯುಸಿನೆಸ್ ಹೆಡ್ ಹೇಳಿರುವುದಾಗಿ ವರದಿಯಾಗಿದೆ. ಈ ಸುದ್ದಿ ಓದಿ, ಜಾತಿ ಎಂಬ ಸಂಕುಚಿತ ಭಾವನೆಯನ್ನು ತಲೆಯಲ್ಲಿ ತುಂಬಿಕೊಂಡ ಹೀನ ಮನಃಸ್ಥಿತಿಗಳು ಇನ್ನೂ ಬದಲಾಗಲಿಲ್ಲವಲ್ಲಾ ಎನಿಸಿ ತುಂಬಾ ಬೇಸರವಾಯಿತು.

ಇಂತಹವುಗಳ ಹಿಂದೆ ಇರುವವರು ಯಾವುದೇ ಸಂಗತಿಯನ್ನು ತೆರೆದ ಮನಸ್ಸಿನಿಂದ ನೋಡುವ ಹೃದಯ ವೈಶಾಲ್ಯ, ನಿರ್ಮಲ ಮನಸ್ಸು ಹೊಂದಲಿ. ಮನೆಯೊಡೆದು ಮನಸ್ಸಿನ ಸ್ವಾಸ್ಥ್ಯ ಹಾಳು ಮಾಡುವಂತಹ ಅನೇಕ ಧಾರಾವಾಹಿಗಳ ನಡುವೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಸಾಧಕರಿಗೆ ಸ್ಫೂರ್ತಿ ತುಂಬುವ ‘ಮಹಾನಾಯಕ’ ಅಂತಹ ಧಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡುತ್ತಿರುವ ಜೀ ವಾಹಿನಿಗೆ ಅಭಿನಂದನೆ.

– ಮಂಜುನಾಥ್ ಟಿ.ಎಸ್.,ತರುವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.