ಗುರುವಾರ , ಜುಲೈ 7, 2022
23 °C

ಮುಷ್ಕರ ನಿಲ್ಲಲಿ, ಅನನುಕೂಲ ತಪ್ಪಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಷ್ಕರದಿಂದ ಓಡಾಟಕ್ಕೆ ಸಂಚಕಾರವಾಗಿರುವ ಸುದ್ದಿಯನ್ನು (ಪ್ರ.ವಾ., ಏ. 7) ಓದಿ ಆತಂಕವಾಯಿತು. ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಆಗಬೇಕೆಂದು ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದೇನೊ ಸರಿ. ಆದರೆ ನಗರ ಮತ್ತು ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳಿಗೆ ತೆರಳಬೇಕಾದರೆ ಬಸ್ಸನ್ನೇ ಅವಲಂಬಿಸಿರುವುದರಿಂದ ಸಾರಿಗೆ ನೌಕರರ‌ ಮುಷ್ಕರದಿಂದ ಗೈರುಹಾಜರಾಗಬೇಕಾಗಿರುವುದು ಬೇಸರದ ಸಂಗತಿ. ಬಸ್ ಪಾಸ್ ಶುಲ್ಕವನ್ನು ತುಂಬಿದರೂ ದುಡ್ಡು ಕೊಟ್ಟು ಖಾಸಗಿ ವಾಹನದಲ್ಲಿ ಹೋಗಬೇಕಾಗಿದೆ.

‌ಕಾಲೇಜು ಉಪನ್ಯಾಸಕನ ವೃತ್ತಿಯಲ್ಲಿರುವ ನಾನು ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ಗ್ರಾಮೀಣ ಭಾಗದ ನನ್ನಿಬ್ಬರು ವಿದ್ಯಾರ್ಥಿಗಳನ್ನು ಕಂಡು ವಾಹನ ನಿಲ್ಲಿಸಿ ವಿಚಾರಿಸಿದೆ. ಪರೀಕ್ಷಾ ಸಮಯವಾದ್ದರಿಂದ ತರಗತಿಗಳನ್ನು ತಪ್ಪಿಸಿಕೊಂಡರೆ ಓದಿದ್ದು ಅರ್ಥವಾಗದೆ ಪರೀಕ್ಷೆಯಲ್ಲಿ ಸಮಸ್ಯೆ ಉಂಟಾಗುವುದರಿಂದ ನಡೆದುಕೊಂಡೇ ಹೋಗುತ್ತಿರುವುದಾಗಿ ಅವರು ತಿಳಿಸಿದರು. ಮೊದಲೇ ಕೋವಿಡ್ ಮತ್ತು ಬೇಸಿಗೆಯ ಕಾವು ಹೆಚ್ಚಾಗುತ್ತಿರುವುದರಿಂದ ಸರ್ಕಾರವು ಸಾರಿಗೆ ನೌಕರರ ಸಮಸ್ಯೆಯನ್ನು ಬಗೆಹರಿಸಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಹಿತ ಕಾಪಾಡುವುದು ಒಳಿತು.

–ಶ್ರೀಧರ ಎಸ್. ವಾಣಿ, ಕೊಪ್ಪಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು