ಸಾರಿಗೆ ನೌಕರರ ಪ್ರತಿಭಟನೆ ಕೆಲವು ಅಹಿತಕರ, ಅಮಾನವೀಯ ಘಟನೆಗಳಿಂದ ತನ್ನ ಅರ್ಥ ಕಳೆದು ಕೊಳ್ಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ಸರಿಯಾದ ಬೇಡಿಕೆಗಳಷ್ಟೇ, ಅವುಗಳ ಈಡೇರಿಕೆಗೆ ಆಗ್ರಹಿಸಿ ನಡೆಯುವ ಪ್ರತಿಭಟನಾ ಮಾರ್ಗವೂ ಮುಖ್ಯವಾಗುತ್ತದೆ ಎಂಬುದನ್ನು ನೌಕರರು ಮರೆತಂತಿದೆ. ಅದರಲ್ಲೂ, ಬಾಗಲಕೋಟೆ ಭಾಗದಲ್ಲಿ ಕರ್ತವ್ಯನಿರತರಾಗಿದ್ದ ಹಿರಿಯ ಚಾಲಕ ನಬಿ ರಸೂಲ್ ಆವಟಿ ಅವರನ್ನು ಸಂಸ್ಥೆಯ ಸಹೋದ್ಯೋಗಿಗಳೇ ಕಲ್ಲು ಹೊಡೆದು ಸಾಯಿಸಿದ್ದಾರೆ ಎನ್ನಲಾದ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸು
ವಂತಹದ್ದು.

ಅಪಘಾತರಹಿತ ಚಾಲನೆಗೆ ಪುರಸ್ಕಾರ ಪಡೆದು, ನಿವೃತ್ತಿಯ ಅಂಚಿನಲ್ಲಿದ್ದ ಆ ಹಿರಿಯ ಜೀವ ಹೀಗೆ ಸಾವಿಗೀಡಾದುದು ಅತ್ಯಂತ ಆಘಾತಕಾರಿ. ತಮಗೆ ಕಲ್ಲು ತಗುಲಿ ರಕ್ತ ಕಾರುತ್ತಿದ್ದರೂ ವಾಹನವನ್ನು ಎಚ್ಚರಿಕೆ ಯಿಂದ ರಸ್ತೆ ಪಕ್ಕಕ್ಕೆ ನಿಲ್ಲಿಸಿ ಪ್ರಯಾಣಿಕರ ಜೀವ ಉಳಿಸಿರುವ ರಸೂಲ್ ಅವರ ಕರ್ತವ್ಯಪ್ರಜ್ಞೆ ಶ್ಲಾಘನೀಯ. ತಮಗೆ ಅನ್ನ ನೀಡಿದ, ಜೀವನ ಕಟ್ಟಿಕೊಟ್ಟ ವಾಹನಗಳಿಗೆ ತಾವೇ ಕಲ್ಲು ತೂರುವುದು, ಕರ್ತವ್ಯಕ್ಕೆ ಹಾಜರಾದ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸುವುದು ಸಮಾಜಘಾತುಕ ಕೃತ್ಯಗಳಾಗುತ್ತವೆ. ಇಂತಹ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು.

- ಡಾ. ಆನಂದ್ ಎನ್.ಎಲ್.,ಅಜ್ಜಂಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.