ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೆಯಿಲ್ಲದ ನಿರ್ಮಾಣ ಕಾಮಗಾರಿ

Last Updated 8 ಡಿಸೆಂಬರ್ 2021, 19:36 IST
ಅಕ್ಷರ ಗಾತ್ರ

ತಡರಾತ್ರಿಯವರೆಗೆ ನಡೆಯುವ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಒಂದು ಕಾನೂನು ರೂಪಿಸಬೇಕಾದ ಅಗತ್ಯವಿದೆ ಎಂಬ ಎಸ್.ರವಿ ಅವರ ಸಲಹೆ (ವಾ.ವಾ., ಡಿ. 7) ಸರಿಯಾಗಿಯೇ ಇದೆ. ಕೆಲವು ದಿನಗಳ ಹಿಂದೆ, ನಮ್ಮ ಮನೆ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಜೆ 7 ಗಂಟೆಯ ನಂತರವೂ ಗ್ರಾನೈಟ್ ಕತ್ತರಿಸುತ್ತಿದ್ದ ಕರ್ಕಶ ಶಬ್ದ ತಾಳಲಾರದೆ ನಾನು ಪೊಲೀಸ್‌ ಕಂಟ್ರೋಲ್ ರೂಮ್‌ಗೆ ಫೋನ್‌ ಮಾಡಿ ‘ಇಷ್ಟೊತ್ತಿನ ಮೇಲೂ ಕಾಮಗಾರಿಗೆ ಅನುಮತಿ ಕೊಟ್ಟವರ‍್ಯಾರು ಮೇಡಂ?’ ಎಂದು ಕೇಳಿದೆ. ‘ಕನ್‌ಸ್ಟ್ರಕ್ಷನ್‌ ಅಲ್ವ ಸರ್, ಸ್ವಲ್ಪ ನೀವೇ ಅಡ್ಜಸ್ಟ್ ಮಾಡ್ಕೊಳ್ಳಿ’ ಎಂಬ ಉತ್ತರ ಅತ್ತಲಿಂದ ಬಂತು. ಆಗ ಆ ಕಟ್ಟಡದ ಬಳಿಯೇ ಹೋಗಿ ಪ್ರಶ್ನಿಸಿದಾಗ, ರವಿ ಅವರು ಹೇಳಿರುವಂತೆ ವಿಷಯ ಜಗಳಕ್ಕೆ ತಿರುಗುವುದರಲ್ಲಿತ್ತು. ಇದನ್ನು ಮನಗಂಡ ನಾನು, ಅದನ್ನು ತಪ್ಪಿಸಲು ಮೆಲ್ಲನೆ ಅಲ್ಲಿಂದ ಜಾಗ ಖಾಲಿ ಮಾಡಿದೆ.

- ರವಿಕಿರಣ್ ಶೇಖರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT