ಸೋಮವಾರ, ಮೇ 16, 2022
24 °C

ಬಳಸದ ವಾಹನ ಜಪ್ತಿ: ಸೂಕ್ತ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ ಹಲವು ವರ್ಷಗಳಿಂದ ಬಳಸದೇ ನಿಲ್ಲಿಸಿರುವ ವಾಹನಗಳನ್ನು ಜಪ್ತಿ ಮಾಡಿ ಗುಜರಿಗೆ ಹಾಕುವ ಗೃಹ ಸಚಿವರ ನಿರ್ಧಾರ ಶ್ಲಾಘನೀಯ (ಪ್ರ.ವಾ., ಫೆ. 2). ಜಪ್ತಿ ಮಾಡುವುದಕ್ಕೆ ಮುಂಚೆ ಅಂತಹ ವಾಹನಗಳ ಮಾಲೀಕರಿಗೆ 6 ತಿಂಗಳ ಸಮಯಾವಕಾಶ ನೀಡುವುದಾಗಿ ಅವರು ತಿಳಿಸಿದ್ದಾರೆ.

ವರ್ಷಾನುಗಟ್ಟಲೆ ವಾಹನಗಳನ್ನು ಬಳಸದೇ ನಿಲ್ಲಿಸಿದವರಿಗೆ 6 ತಿಂಗಳ ಸಮಯಾವಕಾಶ ನೀಡುವುದರಲ್ಲಿ ಅರ್ಥವಿಲ್ಲ. ಕೇವಲ 15-30 ದಿನಗಳ ಸಮಯಾವಕಾಶ ನೀಡುವುದು ಸೂಕ್ತ. ಅಲ್ಲದೆ ಅಂತಹ ವಾಹನಗಳ ಮಾಲೀಕರಿಗೆ ದಂಡ ಹಾಕುವುದಲ್ಲದೆ ಅವುಗಳನ್ನು ಅಲ್ಲಿಂದ ಸಾಗಿಸುವ ಖರ್ಚನ್ನೂ ಅವರಿಂದಲೇ ವಸೂಲು
ಮಾಡುವುದು ಸೂಕ್ತ.

ಇದರೊಂದಿಗೆ, ವಿವಿಧ ಅಪರಾಧಗಳಲ್ಲಿ ಭಾಗಿಯಾದವರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿ ನಗರದ ಹಲವಾರು ಪೊಲೀಸ್‌ ಠಾಣೆಗಳ ಹತ್ತಿರ ರಸ್ತೆ ಬದಿ ಅಥವಾ ಪಾದಚಾರಿ ಮಾರ್ಗಗಳಲ್ಲಿ ನಿಲ್ಲಿಸಿರುವುದು ಸರ್ವೇ ಸಾಮಾನ್ಯವಾಗಿದೆ. ಇವುಗಳಿಂದ ಸಹ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಇಂತಹವುಗಳನ್ನು ಕೂಡ ಕಾನೂನುಬದ್ಧವಾಗಿ ಆಗಿಂದಾಗ್ಗೆ ವಿಲೇವಾರಿ ಮಾಡುವ ಬಗ್ಗೆ ಹಾಗೂ ಇವುಗಳಿಗಾಗಿಯೇ ಪ್ರತ್ಯೇಕವಾದ ಜಾಗ ನಿಗದಿ ಮಾಡುವ ಬಗ್ಗೆ ಸಹ ಚಿಂತನೆ ಮಾಡುವುದು ಅತ್ಯವಶ್ಯಕ.

ಕೆ.ಪ್ರಭಾಕರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು