ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆ ನಡೆಸುವುದು ಜನರ ಸಾಂವಿಧಾನಿಕ ಹಕ್ಕು. ಆದರೆ, ಜನರ ಜೀವಕ್ಕೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ಶಾಂತಿಯುತವಾಗಿ ಪ್ರತಿಭಟನೆ, ಮೆರವಣಿಗೆ ನಡೆಸಬೇಕು. ಒಂದು ಗುಂಪು ಪೌರತ್ವ ಕಾಯ್ದೆಯ ಪರ ಮಾತನಾಡುತ್ತಿದೆ. ಇನ್ನೊಂದು ಗುಂಪು ಇದರ ವಿರುದ್ಧ ಬೀದಿಗಿಳಿದಿದೆ. ಇವರ ನಡುವೆ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ದೇಶದ ಹಲವೆಡೆ ಕರ್ಫ್ಯೂ ಜಾರಿಯಲ್ಲಿದೆ. ಸಾವುನೋವು ಸಂಭವಿಸಿದೆ. ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿದೆ. ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ನಾಯಕರು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವುದು ತರವಲ್ಲ. ನಿಜಾಂಶ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಎಲ್ಲಾ ಮಾಹಿತಿ ಸತ್ಯದಿಂದ ಕೂಡಿರುವುದಿಲ್ಲ. ಅದನ್ನು ಒರೆಗೆ ಹಚ್ಚಿ ಸತ್ಯಾಸತ್ಯತೆಯನ್ನು ತಿಳಿಯುವುದು ಬಹಳ ಮುಖ್ಯ. ಪ್ರಚೋದನಾತ್ಮಕ ಹೇಳಿಕೆಗಳಿಗೆ ನಾಗರಿಕರು ಕಿವಿಕೊಡಬಾರದು.

ಗೌತಮಿ ಎಂ.,ಕೋಟಿಗಾನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.