ಶೈಕ್ಷಣಿಕ ಗುಣಮಟ್ಟ ಎತ್ತರಿಸಿ

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸುವ ಅಗತ್ಯವಿದೆ. ಈ ಸಲದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮೊದಲ ಹತ್ತು ಸ್ಥಾನಗಳನ್ನು ದಕ್ಷಿಣ ಕರ್ನಾಟಕದ ಜಿಲ್ಲೆಗಳು ಪಡೆದರೆ, ಕೊನೆಯ ಏಳು ಸ್ಥಾನಗಳಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿವೆ. ಕಳೆದ ವರ್ಷವೂ ಹೆಚ್ಚು–ಕಡಿಮೆ ಇದೆ ಪರಿಸ್ಥಿತಿ. ಇದು, ವಿದ್ಯಾರ್ಥಿಗಳ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು.

ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಆಸ್ಥೆ ವಹಿಸಬೇಕು. ಬೋಧನಾ ಗುಣಮಟ್ಟವನ್ನು ಉತ್ತಮಪಡಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು. ಕಲಿಕೆಯನ್ನು ಖಾತರಿಪಡಿಸಿಕೊಳ್ಳಲು ನಿರಂತರ ನಿಗಾ ವ್ಯವಸ್ಥೆ ರೂಪಿಸಬೇಕು. ಇಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಅಗತ್ಯವಿದ್ದಲ್ಲಿ ಅವರಿಗೆ ವಿಶೇಷ ತರಬೇತಿ ನೀಡಬೇಕು.

ಮಹೇಂದ್ರ ಟಿ.ಎಂ., ಶಂಕರಘಟ್ಟ, ಶಿವಮೊಗ್ಗ

ಶೂನ್ಯ ಫಲಿತಾಂಶ: ಪರಾಮರ್ಶೆ ಅಗತ್ಯ

ಎಸ್ಎಸ್ಎಲ್ಸಿಯಲ್ಲಿ ಈ ಬಾರಿ 144 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ತಜ್ಞರು ಈ ಕುರಿತು ಚಿಂತಿಸುವ ಅಗತ್ಯವಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದ ಅಗತ್ಯವನ್ನು ಈ ಅಂಶ ಒತ್ತಿಹೇಳುತ್ತಿದೆ. ಎಳೆಯ ಗಿಡಕ್ಕೆ ಫಲವತ್ತಾದ ಗೊಬ್ಬರ ನೀಡಿ ಬಲಿಷ್ಠ ಮರವನ್ನಾಗಿ ಬೆಳೆಸುವಂತೆ, ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಪೋಷಿಸಬೇಕು.

ಕಲಿಕೆ ಮತ್ತು ಗ್ರಹಿಕೆಯಲ್ಲಿ ನಿರೀಕ್ಷಿತ ಮಟ್ಟಕ್ಕೆ ಏರದ ಮಕ್ಕಳನ್ನು ಮತ್ತೊಂದು ಶೈಕ್ಷಣಿಕ ವರ್ಷಕ್ಕೆ ಅದೇ ತರಗತಿಯಲ್ಲಿ ಉಳಿಸುವ ನಮ್ಮ ಹಿಂದಿನ ವ್ಯವಸ್ಥೆ ಪುನಃ ಜಾರಿಯಾಗಬೇಕು. ಒಂದರಿಂದ ಒಂಬತ್ತನೇ ತರಗತಿಯವರೆಗೆ ಕನಿಷ್ಠ ಅಂಕ ಪಡೆಯದ ವಿದ್ಯಾರ್ಥಿಗಳನ್ನೂ ಮುಂದಿನ ತರಗತಿಗೆ ಉತ್ತೀರ್ಣವಾಗಿಸುವ ಪದ್ಧತಿ ಬದಲಾಗಲಿ. ಶಿಕ್ಷಕರು ತಮ್ಮ ವೃತ್ತಿಯನ್ನು ಜೀವನೋಪಾಯದ ಹುದ್ದೆ ಅಂತ ಅಂದುಕೊಳ್ಳದೆ, ಮುಂದಿನ ಬಲಿಷ್ಠ ಪ್ರಜೆಗಳ ಗುರುಗಳು ಎಂದು ಹೆಮ್ಮೆಯಿಂದ ಪಾಠ ಕಲಿಸಬೇಕು.

ಚಂದ್ರಶೇಖರ ಪುಟ್ಟಪ್ಪ, ಬೆಂಗಳೂರು

ಸ್ವಚ್ಛತೆ, ಸುಸ್ಥಿರ ಅಭಿವೃದ್ಧಿಗೆ ಗಮನ ಕೊಡಿ

‘ನಮ್ಮ ಕಾವೇರಿ ನಮ್ಮ ಹೆಮ್ಮೆ’ ಶೀರ್ಷಿಕೆಯಡಿ ಅ.ನ. ಯಲ್ಲಪ್ಪರೆಡ್ಡಿ ಬರೆದಿರುವ ಲೇಖನ (ಪ್ರ.ವಾ., ಏ.3) ಕಣ್ಣು ತೆರೆಸುವಂತಿದೆ. ಕಾವೇರಿ ಆರತಿಗೆ ಒದಗಿಸಿರುವ ₹ 92 ಕೋಟಿ ಅನುದಾನವನ್ನು ಬೇರೆ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವುದರ ಕುರಿತು ಸರ್ಕಾರ ಚಿಂತನೆ ನಡೆಸಲಿ. ಈ ಅನುದಾನದಿಂದ 10 ಸಾವಿರ ಹೆಕ್ಟೇರ್ ಜೌಗು ಪ್ರದೇಶವನ್ನು ಅಭಿವೃದ್ಧಿ ಮಾಡಬಹುದು ಎಂದು ಲೇಖಕರು ಹೇಳಿದ್ದಾರೆ. ಈ ಕುರಿತು ಸರ್ಕಾರ ಗಂಭೀರವಾಗಿ ಯೋಚಿಸಬೇಕು.

ಆರತಿ ಎಂಬ ವ್ಯರ್ಥ ತೋರಿಕೆಯ ಅವಶ್ಯಕತೆ ಈಗೇಕೆ? ಮಣ್ಣು, ಗಾಳಿ ಮತ್ತು ನೀರು ಈ ನಾಡಿನ ಭವ್ಯ ಸಂಪತ್ತು. ಅವುಗಳು ಕೆಡದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಕ್ಷಣಾರ್ಧದ ಇಂತಹ ಖುಷಿಗಿಂತ ಜಲಮೂಲಗಳ ಒಡಲನ್ನು ಸ್ವಚ್ಛಗೊಳಿಸುವುದು ಇಂದಿನ ಅಗತ್ಯ. ಜನರ ತೆರಿಗೆ ಹಣ ಸದುಪಯೋಗ ಆಗಬೇಕು. ಸ್ವಚ್ಛತೆ, ಸುಸ್ಥಿರ ಅಭಿವೃದ್ಧಿ ನಮ್ಮ ಗುರಿಯಾಗಬೇಕು.

ಶುಭಾ ಕೆ.ಆರ್., ದಾವಣಗೆರೆ

ಶಾಸಕರು ಸಂಸ್ಕಾರ ರೂಢಿಸಿಕೊಳ್ಳಲಿ

ವಿಜಯಪುರ ಜಿಲ್ಲೆ ಹಾಗೂ ಬಾಗಲಕೋಟೆ ಜಿಲ್ಲೆಯನ್ನು ಪ್ರತಿನಿಧಿಸುವ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ನಡುವೆ ನಡೆದಿರುವ ವಾಕ್ಸಮರ ಹೇಸಿಗೆ ತರುವಂತಿದೆ. ವ್ಯಕ್ತಿ ನೆಲೆಯ ಆರೋಪ– ಪ್ರತ್ಯಾರೋಪಗಳು ಜನರಲ್ಲಿ ರೇಜಿಗೆ ಮೂಡಿಸಿವೆ. ಸಮಾಜಮುಖಿ ಸಂವಾದ, ಚರ್ಚೆಗಳು ಎಂದೋ ಮೂಲೆ ಸೇರಿವೆ.

ಈ ಪ್ರದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳನ್ನು ಪರಿಹರಿಸುವ ದಿಸೆಯಲ್ಲಿ ಪ್ರಯತ್ನ ಮಾಡುವುದು ಬಿಟ್ಟು, ಶಾಸಕರು ಬೈಗುಳಗಳಲ್ಲೇ ಕಾಲಹರಣ ಮಾಡುತ್ತಿರುವಂತಿದೆ. ಇವರನ್ನು ಆಯ್ಕೆ ಮಾಡಿದ ಮತದಾರರು ಪಶ್ಚಾತ್ತಾಪಪಡುವಂತಾಗಿದೆ. ಪ್ರಜಾಪ್ರತಿನಿಧಿಗಳಿಗೆ ಸಂಸ್ಕಾರ ಮುಖ್ಯ. ಭಾಷೆಯ ಕೀಳುಮಟ್ಟದ ಪ್ರಯೋಗವನ್ನು ಗಮನಿಸಿದರೆ ಇವರಲ್ಲಿ ಆ ಕೊರತೆ ದೊಡ್ಡ ಮಟ್ಟದಲ್ಲಿ ಇರುವಂತೆ ಕಾಣುತ್ತಿದೆ. ಇನ್ನಾದರೂ ಸರಿಪಡಿಸಿಕೊಳ್ಳಲಿ.

ವಿ.ಜಿ.ಇನಾಮದಾರ, ಸಾರವಾಡ, ವಿಜಯಪುರ

ಕೋಚಿಂಗ್ ಕೇಂದ್ರಗಳಿಗೆ ಲಗಾಮು ಹಾಕಿ

ಕೋಚಿಂಗ್ ಕೇಂದ್ರಗಳ ಹಾವಳಿ ಕುರಿತು ಗುರುರಾಜ್ ಎಸ್. ದಾವಣಗೆರೆ ಅವರ ವಿಶ್ಲೇಷಣೆ (ಪ್ರ.ವಾ., ಮೇ 2) ವಸ್ತುಸ್ಥಿತಿಗೆ ಕನ್ನಡಿ ಹಿಡಿದಿದೆ. ಇವುಗಳ ಪ್ರಖರ ಬೆಳಕಲ್ಲಿ ಶಾಲೆ–ಕಾಲೇಜುಗಳು ಕಾಣದಾಗಿವೆ. ಒಂದು ಕಾಲ ಇತ್ತು. ಪ್ರವೇಶ ಪಡೆಯಲು ಕೆಲವು ಪ್ರತಿಷ್ಠಿತ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳು ಮತ್ತು ಪೋಷಕರು ಸಾಲುಗಟ್ಟಿ ನಿಂತಿರುತ್ತಿದ್ದರು. ಈಗ ಪರೀಕ್ಷೆ ಫಲಿತಾಂಶ ಹೊರಬೀಳುವ ಮೊದಲೇ ಕೋಚಿಂಗ್ ಕೇಂದ್ರಗಳಿಗೆ ಎಡತಾಕುವ ಸ್ಥಿತಿ ಉಂಟಾಗಿದೆ.

ಇದರ ನಡುವೆ ಮಕ್ಕಳು ಒತ್ತಡಕ್ಕೆ ಸಿಲುಕಿ ಒದ್ದಾಡುವುದನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ. ಈಗ ಕೋಚಿಂಗ್ ಸೆಂಟರ್ಗಳೇ ಕಾಲೇಜುಗಳಿಗಿಂತ ಶಕ್ತಿಶಾಲಿಯಾಗಿವೆ. ಕೆಲವು ಕಾಲೇಜುಗಳ ಜೊತೆ ಒಪ್ಪಂದ ಮಾಡಿಕೊಂಡು ಪೋಷಕರಿಂದ ಲಕ್ಷಾಂತರ ಹಣ ಪೀಕುತ್ತಿವೆ. ಈ ಹಾವಳಿ ಬಗ್ಗೆ ಶಿಕ್ಷಣ ಇಲಾಖೆಗೆ ಗೊತ್ತಿಲ್ಲದಿರುವುದು ಏನೂ ಇಲ್ಲ. ಇಲಾಖೆ ಕಂಡೂ ಕಾಣದಂತೆ ಜಾಣಕುರುಡು ಮತ್ತು ಜಾಣಕಿವುಡನ್ನು ಪ್ರದರ್ಶಿಸುತ್ತಿದೆ.

ಕೆಲವೇ ವಿಷಯಗಳನ್ನು ಬೋಧಿಸುವ ಈ ಕೇಂದ್ರಗಳು ಮಕ್ಕಳನ್ನು ಮೌಲ್ಯಾಧಾರಿತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿವೆ. ಕ್ರೀಡೆ, ಸಂಸ್ಕೃತಿಕ ವಾತಾವರಣದಿಂದ ದೂರಮಾಡುತ್ತಿವೆ. ನಿಯಂತ್ರಣಕ್ಕೆ ಈಗಲಾದರೂ ಸರ್ಕಾರ ಮುಂದಾಗಲಿ.

ಎಚ್.ಎಸ್.ಸನತ್ ಕುಮಾರ್, ಚಂದಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.