ಶನಿವಾರ, ಜೂನ್ 25, 2022
24 °C

ವಾಚಕರ ವಾಣಿ: ಅರ್ಧದಷ್ಟಾದರೂ ಮರಗಳು ಉಳಿಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆದ್ದಾರಿಗಳ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆಯು ಸಸಿ ನೆಟ್ಟು ಪೋಷಿಸುತ್ತದೆ. ಆದರೆ ಮುಂದೆ ಅದೇ ಮರಗಳು ಇಕ್ಕೆಲಗಳ ವಿದ್ಯುತ್ ತಂತಿಗಳಿಗೆ ತಗುಲಿ ವಿದ್ಯುತ್ ಅವಘಡ ಸಂಭವಿಸುತ್ತದೆ ಎಂಬ ಕಾರಣಕ್ಕೆ, ನಿರ್ದಾಕ್ಷಿಣ್ಯವಾಗಿ ಅವುಗಳನ್ನು ಕಡಿದು ಹಾಕಲಾಗುತ್ತದೆ. ಇದನ್ನು ತಪ್ಪಿಸುವ ಹೊಣೆ ಯಾರದು?

ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು, ಒಂದು ಬದಿಯಲ್ಲಿ ವಿದ್ಯುತ್ ಕಂಬಗಳನ್ನು, ಮತ್ತೊಂದು ಬದಿಯಲ್ಲಿ ನೆಟ್ಟ ಸಸಿಗಳನ್ನು ಉಳಿಸುವ ಸ್ಪಷ್ಟ ನಿಯಮವನ್ನು ಜಾರಿಗೊಳಿಸಬೇಕು. ಆಗ ಕನಿಷ್ಠ ಅರ್ಧದಷ್ಟಾದರೂ ಮರಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ.

–ಮಾ.ನಾ.ಶಿವಕುಮಾರ್, ಮಾರಸಂದ್ರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು