ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದೇ ಭಾರತ್: ದಕ್ಷಿಣಕ್ಕೂ ಸಿಗಲಿ ಆದ್ಯತೆ

ಅಕ್ಷರ ಗಾತ್ರ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವಿನ್ಯಾಸವನ್ನು ರೂಪಿಸಿ ತಯಾರಿಸಿದ್ದು ಚೆನ್ನೈನ ಇಂಟಿಗ್ರಲ್ ರೈಲ್ವೆ
ಕೋಚ್ ಕಾರ್ಖಾನೆ. ಆದರೆ ಈ ರೈಲು ಸೇವೆ ಒದಗಿಸುತ್ತಿರುವುದು ದೆಹಲಿ-ಕಟ್ರಾ ಮತ್ತು ದೆಹಲಿ-ವಾರಾಣಸಿ ನಡುವೆ! ಎರಡರಲ್ಲಿ ಒಂದು ರೈಲನ್ನಾದರೂ ದಕ್ಷಿಣ ಭಾರತದಲ್ಲಿ ಓಡಿಸಬೇಕೆಂಬ ಔದಾರ್ಯ ಕೇಂದ್ರ ಸರ್ಕಾರಕ್ಕೆ ಬರಲಿಲ್ಲ, ನಮ್ಮ ಜನಪ್ರತಿನಿಧಿಗಳು ಪ್ರಶ್ನಿಸಲೂ ಇಲ್ಲ.

ಉದ್ದೇಶಿತ ಬುಲೆಟ್ ರೈಲು ಅಹಮದಾಬಾದ್-ಮುಂಬೈ ನಡುವೆ ಸಂಚರಿಸಲಿದೆ. ಬುಲೆಟ್‌ ರೈಲಿಗೆ ಸಂಬಂಧಿಸಿದ ಮಾರ್ಗಗಳು ಇತ್ತೀಚೆಗೆ ಮತ್ತೆ ಘೋಷಣೆಯಾಗಿದ್ದು ಅವು ಇಂತಿವೆ: ಅಹಮದಾಬಾದ್-ದೆಹಲಿ, ವಾರಾಣಸಿ-ಹೌರಾ, ವಾರಾಣಸಿ-ದೆಹಲಿ, ಆಗ್ರಾ-ಲಖನೌ, ದೆಹಲಿ-ಅಮೃತಸರ್, ಲೂಧಿಯಾನಾ-ಜಲಂಧರ್, ಮುಂಬೈ-ಹೈದರಾಬಾದ್, ಮುಂಬೈ-ನಾಸಿಕ್ ಹಾಗೂ ಚೆನ್ನೈ-ಮೈಸೂರು. ಬಿಜೆಪಿ ಪ್ರಾಬಲ್ಯವಿರುವ ಉತ್ತರ ಭಾರತಕ್ಕೆ ಈ ರೈಲು ಯೋಜನೆಗಳಲ್ಲಿ ಹೆಚ್ಚು ಪಾಲನ್ನು ಕೇಂದ್ರ ಸರ್ಕಾರ ನೀಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಬೆಂಗಳೂರು ಮೂಲಕ ಹಾದುಹೋಗುವ ಚೆನ್ನೈ-ಮೈಸೂರು ಬುಲೆಟ್ ರೈಲು ಮಾರ್ಗ ದಕ್ಷಿಣದವರನ್ನು ಸಮಾಧಾನಪಡಿಸಲೋ ಎಂಬಂತೆ ಘೋಷಿಸಿದ್ದರೂ ಹೆಚ್ಚು ಪ್ರಯೋಜಕವಲ್ಲ. ಇದನ್ನೇ ಚೆನ್ನೈ-ಬೆಂಗಳೂರು-ಹುಬ್ಬಳ್ಳಿ-ಮುಂಬೈ ಘೋಷಿತ ಕೈಗಾರಿಕಾ ಕಾರಿಡಾರ್ ಉದ್ದಕ್ಕೂ ರೂಪಿಸಿದ್ದರೆ ಬುಲೆಟ್ ರೈಲಿನ ಪ್ರಯೋಜನ ಹೆಚ್ಚು ಸಾರ್ಥಕವಾಗುತ್ತಿತ್ತು. ಸ್ವಾತಂತ್ರ್ಯೋತ್ತರದಲ್ಲೂ ರೈಲ್ವೆ ಯೋಜನೆಗಳ ಜಾರಿ ವಿಷಯದಲ್ಲಿ ದಕ್ಷಿಣ ಭಾರತವನ್ನು ನಿರ್ಲಕ್ಷಿಸುತ್ತಲೇ ಬಂದ ಕೇಂದ್ರದಲ್ಲಿನ ಸರ್ಕಾರಗಳು ‘ಉತ್ತರ ಭಾರತವೊಂದೇ ವಂದೇ ಭಾರತ’ ಎಂದು ಪರಿಗಣಿಸಿದಂತಿವೆ. ಕರ್ನಾಟಕದಲ್ಲಿ 25 ಜನ ಬಿಜೆಪಿ ಸಂಸದರಿದ್ದರೂ ರೈಲ್ವೆ ಯೋಜನೆಗಳನ್ನು ಕೇಳಿ ಪಡೆದುಕೊಳ್ಳುವ ಧೈರ್ಯ, ಮನಸ್ಸು ಅವರಿಗೆ ಬಂದಂತಿಲ್ಲ. ಅಧಿಕಾರದ ಮುಂದೆ ಜನೋಪಕಾರಿ ಕಾರ್ಯಗಳು ಗೌಣ ಎಂಬ ನಿಲುವಿನಿಂದ ಜನಪ್ರತಿನಿಧಿಗಳು
ಹೊರಬರಲಿ.

– ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ,ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT