ಶನಿವಾರ, ಫೆಬ್ರವರಿ 27, 2021
30 °C

ನೌಕರಶಾಹಿಯ ಮನೋಭಾವ: ಆಗಲೂ ಈಗಲೂ...

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

‘ಮತದಾರನಾಗುವುದು ಪ್ರಯಾಸ’ ಎಂಬ ಸುದ್ದಿಯನ್ನು (ಪ್ರ.ವಾ., ಜ. 13; 50 ವರ್ಷಗಳ ಹಿಂದೆ) ಓದಿದಾಗ, ಆ ದಿನಗಳಲ್ಲಿ ಮತದಾರನಾಗಿ ಹೆಸರು ನೋಂದಾಯಿಸಲು ನಾಗರಿಕರು ಪಡುತ್ತಿದ್ದ ಪಡಿಪಾಟಲಿನ ಅರಿವಾಗುತ್ತದೆ. ಆಗ ಮತದಾರನಾಗಿ ನೋಂದಾಯಿಸಿಕೊಳ್ಳಲು ಹತ್ತು ಪೈಸೆ ಪಾವತಿಸುವ ಅಗತ್ಯ ಏನಿತ್ತೋ ತಿಳಿಯದು. ನೋಂದಣಿ ಮಾಡಿಕೊಳ್ಳಬೇಕಾದ ಅಧಿಕಾರಿಗಳನ್ನು ಹಿಡಿಯಲು ನಾಗರಿಕರು ಪದೇಪದೇ ಸರ್ಕಾರಿ ಕಚೇರಿಗೆ ಎಡತಾಕುತ್ತಿದ್ದುದನ್ನು ನೋಡಿದರೆ, ನೌಕರಶಾಹಿಯ ಮನೋಭಾವದಲ್ಲಿ ಅಂದಿಗೂ ಇಂದಿಗೂ ಏನೂ ವ್ಯತ್ಯಾಸವಿಲ್ಲ ಎನಿಸುತ್ತದೆ.

ಇಂದು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಸುಲಭವಾದರೂ ಆಧಾರ್‌ ನೋಂದಣಿ ಕಾರ್ಯ ಅಷ್ಟು ಸರಳವಾಗಿಲ್ಲ. ಇತರ ಸರ್ಕಾರಿ ಕೆಲಸಗಳಿಗೆ ಅಲೆಯುವುದು ತಪ್ಪಿಲ್ಲ. ಇತಿಹಾಸದಿಂದ ಕಲಿಯಲೇಬೇಕಾದ ಪಾಠಗಳನ್ನು ನಾವು ಕಲಿಯುತ್ತಿಲ್ಲ ಎಂಬುದಕ್ಕೆ ಇದು ನಿದರ್ಶನದಂತಿದೆ.

- ಬಿ.ಆರ್.ಅಣ್ಣಾಸಾಗರ, ಸೇಡಂ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು