‘ಬಹಿರಂಗವಾಗಿ ರಸ್ತೆಯಲ್ಲಿ ಆಕಳ ಕಡಿದಿದ್ದಕ್ಕೆ ಕೇರಳದಲ್ಲಿ ಪ್ರವಾಹ ಬಂದಿದೆ’ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಎಲ್ಲಿಂದ ಎಲ್ಲಿಗೆ ಸಂಬಂಧ!

ಹಿಂದೆ, ಯಜ್ಞ ಯಾಗಾದಿಗಳು ನಡೆಯುತ್ತಿದ್ದ ಕಾಲದಲ್ಲಿ ಋಷಿಗಳು ಹಸುಗಳನ್ನು ಕೊಂದು ತಿನ್ನುತ್ತಿದ್ದರು ಎಂಬ ಉಲ್ಲೇಖಗಳಿವೆ. ‘ಆರ್ಯರು ಗೋಮಾಂಸ ಸೇವಿಸುತ್ತಿದ್ದರು’ ಎಂದು ಆರ್.ಎಸ್. ಶರ್ಮಾ ಅವರು ಚರಿತ್ರೆ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಆಗ ಎಷ್ಟು ಪ್ರವಾಹಗಳು ಬಂದಿದ್ದವು? ಪ್ರಕೃತಿ ವೈಪರೀತ್ಯಗಳಿಗೆ ಹತ್ತು ಹಲವು ಕಾರಣಗಳಿರುತ್ತವೆ. ಅದಕ್ಕೆ ಇಂಥ ಮೌಢ್ಯಗಳನ್ನು ಆರೋಪಿಸುವುದು ಸರಿಯಲ್ಲ. ಹಸುವನ್ನು ಕೊಲ್ಲಬೇಡಿ ಎಂದರೆ ತಪ್ಪಿಲ್ಲ. ಆದರೆ ಅದನ್ನು ಕೊಂದಿದ್ದರಿಂದ ಪ್ರವಾಹ ಬಂದಿದೆ ಎನ್ನುವುದು ಮೂಢನಂಬಿಕೆ.

ಪ್ರೊ.ಎನ್.ಎಸ್. ರಘುನಾಥ್, ಹೊಸಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.