ಯಾರಿಗಾಗಿ ‘ಬಡವರ ಬಂಧು’?

7

ಯಾರಿಗಾಗಿ ‘ಬಡವರ ಬಂಧು’?

Published:
Updated:

ಬೀದಿಬದಿಯ ವ್ಯಾಪಾರಿಗಳ ಅನುಕೂಲಕ್ಕಾಗಿ ಸರ್ಕಾರ ಇತ್ತೀಚೆಗಷ್ಟೇ ‘ಬಡವರ ಬಂಧು’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದಿದೆ. ಇದು ಸಂತೋಷದ ವಿಚಾರ. ಅದರೆ ಇನ್ನೊಂದೆಡೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಹಲವು ಕಡೆಗಳಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ವ್ಯಾಪಾರಿಗಳ ತಕ್ಕಡಿ, ಕುರ್ಚಿ, ಹಣ್ಣು, ತರಕಾರಿ ಮೂಟೆಗಳನ್ನು ಸಹ ಅಧಿಕಾರಿಗಳು ಹೊತ್ತೊಯ್ದಿದ್ದಾರೆ.

ಬೀದಿಬದಿ ವ್ಯಾಪಾರವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಬಿಬಿಎಂಪಿಯ ಈ ನಡೆಯಿಂದಾಗಿ ತೊಂದರೆ ಅನುಭವಿಸುವಂತಾಗಿದೆ. ಒಂದೆಡೆ ವ್ಯಾಪಾರಿಗಳಿಗಾಗಿ ಯೋಜನೆ ರೂಪಿಸುವುದು, ಇನ್ನೊಂದೆಡೆ ಅವರನ್ನು ಒಕ್ಕಲೆಬ್ಬಿಸುವುದು ಎಂಥ ತಂತ್ರ? ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದಾದರೆ ‘ಬಡವರ ಬಂಧು’ ಯೋಜನೆ ಇರುವುದು ಯಾರಿಗಾಗಿ?

-ರೂಪೇಶ ವಿದ್ಯಾರಣ್ಯಪುರ,  ಬೆಂಗಳೂರು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !