ಸಂಕಷ್ಟಕ್ಕೆ ಸಿಲುಕಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ನೋವಿನ ಸಂಗತಿ. ರೈತರ ಕಷ್ಟಗಳ ಬಗ್ಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಹತ್ವದ ಚರ್ಚೆ ಆಗುತ್ತಿದ್ದ ವೇಳೆ ಕೆಲವು ಶಾಸಕರು, ಸಚಿವರು, ಮತ್ತು ಮುಖ್ಯಮಂತ್ರಿ ಸುಖಾಸನಗಳ ಮೇಲೆ ನಿದ್ದೆಗೆ ಜಾರಿದ್ದ ದೃಶ್ಯಗಳು ಟಿ.ವಿ. ಚಾನೆಲ್‌ಗಳಲ್ಲಿ ನೇರ ಪ್ರಸಾರ ಕಂಡವು. ಈ ದೃಶ್ಯಗಳನ್ನು ನೋಡಿದಾಗ ನಿಜಕ್ಕೂ ಬೇಸರವಾಯಿತು. ಬಳಲಿಕೆ ಆದಾಗ ನಿದ್ದೆ ಹತ್ತುವುದು ಸಹಜ. ಆದರೆ ಅನ್ನದಾತನ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತಿದ್ದಾಗ ನಿದ್ದೆಗೆ ಜಾರುವುದು ಸರಿಯಾದ ಸಂದೇಶವನ್ನು ರವಾನಿಸುವುದಿಲ್ಲ. ನಾಯಕರೆನಿಸಿಕೊಂಡವರು ಈ ಸೂಕ್ಷ್ಮ ಅರಿತು ನಡೆಯಬೇಕು. ನಿದ್ದೆ ಸನಿಹ ಸುಳಿಯದಂತೆ ಎಚ್ಚರ ವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.