ಗಿರೀಶ್ ಕಾರ್ನಾಡರು, ವಿ. ಎಸ್. ನೈಪಾಲ್ರ ವಿರುದ್ಧ ನಡೆಸಿರುವ ತೀವ್ರ ವಾಗ್ದಾಳಿ, ಬಹುತೇಕ ಎಲ್ಲಾ ಮಾಧ್ಯಮಗಳಲ್ಲೂ ಬಿತ್ತರಗೊಂಡಿದೆ. ಶತಮಾನಗಳ ಹಿಂದಿನಿಂದಲೂ ಭಾರತದ ಸಂಗೀತ ಮತ್ತು ನಾಟಕ ಕ್ಷೇತ್ರದಲ್ಲಿ ದುಡಿದಿರುವ ಮುಸಲ್ಮಾನರ ಬಗೆಗೆ ನೈಪಾಲ್ ತಮ್ಮ ಮೂರು ಗ್ರಂಥಗಳಲ್ಲಿ ಏನೂ ಬರೆದಿಲ್ಲವೆಂಬ ವಿಷಯದ ಕುರಿತಂತೆ ಮುಂಬೈ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಚರ್ಚೆ ನಡೆದಿವೆ.
ಹಾಗಾಗಿ ವಿ. ಎಸ್. ನೈಪಾಲ್ರನ್ನು ಕುರಿತ ಕಾರ್ನಾಡರ ಟೀಕೆ ಸಮರ್ಥನೀಯವೇ ಸರಿ.

ಭಾರತ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಸ್ಲಿಂ ಜನವರ್ಗವನ್ನು ಈ ರೀತಿಯಾಗಿ ಅನುಮಾನಿಸುವುದಾಗಲಿ, ಅವಮಾನಿಸುವುದಾಗಲಿ ಸಂವಿಧಾನವಿರೋಧಿ ನಿಲುವೇ ಎನ್ನಬಹುದು.

`ಲೇಖನ ನೈಪಾಲ್ರವರಿಗೆ ಪ್ರಶಸ್ತಿ ನೀಡಿರುವುದು ಅವರ ಜೀವಮಾನದ ಒಟ್ಟು ಸಾಧನೆಗೇ ಹೊರತು ಅವರ ಪುಸ್ತಕಗಳಿಗಲ್ಲ~ ಎಂಬುದಾಗಿ, `ಲಿಟರೇಚರ್ ಲೈವ್~ ಕಾರ್ಯಕ್ರಮದ ನಿರ್ದೇಶಕ ಅನಿಲ್ ಧಾರ್ಕರ್ ಹೇಳಿಕೊಂಡಿದ್ದಾರೆ. ಹಾಗಾದರೆ, ನೈಪಾಲ್ರವರು ಬರೆದು ಪ್ರಕಟಿಸುವ ಪುಸ್ತಕಗಳು ಅವರ ಜೀವನದ ಒಟ್ಟು ಸಾಧನೆಯ ಅಂಗಗಳೇ ಅಲ್ಲವೆ?

ಅಲ್ಲದೆ ಮುಖ್ಯ ಅತಿಥಿಯಾಗಿ ಆ ವೇದಿಕೆಯ ಮೇಲೆ ಆಗಮಿಸಿದ್ದ ಗಿರೀಶ್ ಕಾರ್ನಾಡರಿಗೆ ನೀವು ಇದನ್ನೇ ಮಾತನಾಡಬೇಕು. ಇಷ್ಟನ್ನೇ ಮಾತನಾಡಬೇಕೆಂದು ನಿರೀಕ್ಷಿಸುವುದು ಸರಿಯಲ್ಲವೆಂಬುದನ್ನು, ಆ ಕಾರ್ಯಕ್ರಮದ ವ್ಯವಸ್ಥಾಪಕರು ಅರ್ಥಮಾಡಿಕೊಳ್ಳದೇ ಹೋದದ್ದನ್ನು ಯಾರೂ ಮೆಚ್ಚುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.