ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಮುನ್ನ ಯಲಹಂಕ ಉಪನಗರಕ್ಕೆ ವಾರಕ್ಕೆ ಮೂರ‌್ನಾಲ್ಕು ದಿನ ಕಾವೇರಿ ನೀರನ್ನು ಒದಗಿಸುತ್ತಿದ್ದರು. ಪಾಲಿಕೆಗೆ ಸೇರಿದ ಮೇಲೆ ವಾರಕ್ಕೆ ಒಂದು ಅಥವಾ ಎರಡು ದಿನ ಮಾತ್ರ ನೀರು ಬರುತ್ತದೆ. ಇದರಿಂದ ನಾಗರಿಕರಿಗೆ ಬಹಳ ತೊಂದರೆಯಾಗಿದೆ.

ಆದ್ದರಿಂದ ಈ ಉಪನಗರಕ್ಕೆ ಮೊದಲಿನಂತೆ ವಾರಕ್ಕೆ ಮೂರ‌್ನಾಲ್ಕು ದಿನವಾದರೂ ಕಾವೇರಿ ನೀರನ್ನು ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಪಾಲಿಕೆಯ ವರಿಷ್ಠರಲ್ಲಿ ನನ್ನ ಕಳಕಳಿಯ ಮನವಿ.
-ಸತ್ಯಾನಂದ

ಮೇಯರ್‌ಗೆ ಕೃತಜ್ಞತೆ
ಮೆಟ್ರೊ ಕೆಲಸದಿಂದ ಬೆಂಗಳೂರು ರಸ್ತೆಗಳು ಹಾಳಾಗಿದ್ದು ನಿತ್ಯವೂ ಚಾಲಕರು ವಾಹನ ಓಡಿಸಲು ಹರ ಸಾಹಸ ಪಡುತ್ತ್ದ್ದಿದರು. ಇದರಿಂದ ಅನೇಕ ಅಪಘಾತಗಳು ಕೂಡ ಸಂಭವಿಸಿದ್ದವು.

ಈ ಹಿನ್ನೆಲೆಯಲ್ಲಿ ಮೇಯರ್ ಶಾರದಮ್ಮನವರು ವಿವಿಧೆಡೆ ಸಂಚರಿಸಿ ರಸ್ತೆ ದುಸ್ಥಿತಿಯನ್ನು ಕಣ್ಣಾರೆ ಕಂಡು ಮೆಟ್ರೊ ನಿಗಮಕ್ಕೆ ಎಚ್ಚರಿಕೆ ನೀಡಿ ಸೆಪ್ಟೆಂಬರ್ 25ರ ಒಳಗೆ ರಸ್ತೆಗಳನ್ನು ರಿಪೇರಿ ಮಾಡಬೇಕೆಂದು ಆದೇಶಿಸಿದ್ದರು.

ಇದರ ಫಲವಾಗಿ ನವರಂಗ್ ಬಳಿಯ ರಸ್ತೆಗಳು ಈಗ ರಿಪೇರಿ ಕಂಡಿವೆ. ವಾಹನಗಳು ಸಲೀಸಾಗಿ ಚಲಿಸುವಂತಾಗಿದೆ. ಇದಕ್ಕಾಗಿ ಮೇಯರ್ ಅವರಿಗೆ ಕೃತಜ್ಞತೆಗಳು.

ಇದೇ ರೀತಿ ಅವರು ನಗರದ ಎಲ್ಲ ಭಾಗಗಳಿಗೂ ಭೇಟಿ ನೀಡಿ ಸ್ವಚ್ಛತೆ ಮೊದಲಾದ ವಿಷಯಗಳಲ್ಲೂ ಆಸಕ್ತಿವಹಿಸಿ ನಾಗರಿಕರ ಕಷ್ಟಗಳನ್ನು ನಿವಾರಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಡಿ.ಎಸ್. ನಂಜುಂಡಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.