ಅರವತ್ತಾರು ವರ್ಷದ ನಾನು ಕಳೆದ ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದೇನೆ. ಮಣಿಪಾಲ್ ಮತ್ತು ಶಿವಮೊಗ್ಗ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವೆ.
ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು, ಪ್ರತಿ ತಿಂಗಳೂ ಔಷಧೋಪಚಾರ ಸೇರಿದಂತೆ 25 ಸಾವಿರ ರೂಪಾಯಿ ಖರ್ಚು ಬರುತ್ತಿದೆ. ಈ ಕಾಯಿಲೆಯಿಂದ ಜರ್ಜರಿತನಾಗಿ ಆರ್ಥಿಕವಾಗಿ ಕಷ್ಟದಲ್ಲಿದ್ದೇನೆ. ಆದ್ದರಿಂದ ದಾನಿಗಳು ಆರ್ಥಿಕ ನೆರವು ನೀಡಬೇಕಾಗಿ ವಿನಂತಿ.
ಸಹಾಯ ಮಾಡುವವರು ನನ್ನ ಹೆಸರಿನಲ್ಲಿರುವ ಎಸ್.ಬಿ. ಖಾತೆ ನಂ. 138201010004742, ಐಎಫ್ಎಫ್ಸಿ ಕೋಡ್ (ವಿಐಜೆಬಿ 000 1382) ವಿಜಯಾ ಬ್ಯಾಂಕ್, ತೀರ್ಥಹಳ್ಳಿ ಇಲ್ಲಿಗೆ ನಗದನ್ನು ಜಮಾ ಮಾಡಬಹುದು.