ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಗ್ರಂಥಾಲಯ ಬಲಪಡಿಸಿ

Last Updated 10 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗ­ಳೂರಿನ ಕಬ್ಬನ್‌ ಉದ್ಯಾನದಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಶತಮಾನದ ಸಂಭ್ರಮ­. ಇದರ ಇತಿಹಾಸ  ಬಲ್ಲ­ವ­ರಿಗೆ ಮೈಸೂರು ಮಹಾರಾಜರ ದೂರ­ದೃಷ್ಟಿ ನೆನಪಾಗು­ತ್ತದೆ. ದೇಣಿಗೆಯಿಂದ ನಿರ್ಮಿಸಿದ ಈ ಕಟ್ಟಡ ನಾಡಿನ ಅನೇಕ ಪ್ರತಿಭೆಗಳಿಗೆ ಅಧ್ಯಯನ ನೆಲೆಯೂ  ಹೌದು. ಇಲ್ಲಿನ ಅಮೂಲ್ಯ ಗ್ರಂಥಗಳ ಅಧ್ಯ­ಯ­ನದ ಫಲವಾಗಿ ವಿಶ್ವದ ಎಲ್ಲ ಕಡೆಗಳಲ್ಲಿ ಹರಡಿದ ಓದುಗರು ಇಂದಿಗೂ ಈ ಗ್ರಂಥಾಲಯವನ್ನು ಸ್ಮರಿಸುತ್ತಾರೆ.

ನಮ್ಮ ಹಿರಿಯರು ಪ್ರಾರಂಭಿಸಿದ ಬೆಂಗಳೂರಿನ ಅನೇಕ ಗ್ರಂಥಾಲಯಗಳಿಗೆ ಇತ್ತೀಚೆಗೆ ದಿನಪತ್ರಿಕೆಗಳು ಸರಬ­ರಾಜಾಗುತ್ತಿಲ್ಲ. ಹಣದ ಕೊರತೆಯಿಂದ  ಸರಬರಾಜು ಸ್ಥಗಿತಗೊಂಡಿದೆ ಎಂದು ‘ಪ್ರಜಾವಾಣಿ’ ಸಹಿತ ಅನೇಕ ದಿನಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಪ್ರಜ್ಞಾವಂತ ಓದುಗರು ಚಕಾರವೆತ್ತಿಲ್ಲ ಎಂಬುದು ವಿಷಾದದ ಸಂಗತಿ. ನಾಡಿನ ಪ್ರಜ್ಞಾವಂತರು ಮತ್ತು ಆಡಳಿತಶಾಹಿ ಆತ್ಮಾವ­ಲೋಕನ ಮಾಡಿಕೊಳ್ಳಲು ಇದು ಸಕಾಲ.

ಶತಮಾನದ ಸಂಭ್ರಮದಲ್ಲಿರುವ ಈ ಗ್ರಂಥಾಲಯದ ಸವಿನೆನಪಿಗಾಗಿ ಗ್ರಾಮೀಣ ಗ್ರಂಥಾಲಯಗಳ ಬಲ­ವರ್ಧನೆಗೆ ಸರ್ಕಾರ ಕಾಲಮಿತಿ ಕಾರ್ಯಯೋಜನೆ ಹಾಕಿಕೊಳ್ಳಬೇಕಾಗಿದೆ. ಕುವೆಂಪು  ಅವರು ವಿದ್ಯಾರ್ಥಿ ದೆಸೆಯಲ್ಲಿ ಮೈಸೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ತಾವು ಮೊದಲು ಓದಿದ ರಾಮಕೃಷ್ಣ ಪರಮಹಂಸರ ಕೃತಿಯಿಂದ ತಮ್ಮ ಜೀವನದಲ್ಲಿ ಆದ ತಿರುವನ್ನು  ‘ನೆನಪಿನ ದೋಣಿ’ಯಲ್ಲಿ ಪ್ರಸ್ತಾಪಿಸಿದ್ದಾರೆ.  ನಾವೆಲ್ಲರೂ ಓದಿನ ನಿರಂತರತೆಯನ್ನು ಬೆಳೆಸಿಕೊಳ್ಳದಿದ್ದರೆ, ಕ್ಷೋಭೆ­ಗಳನ್ನು ಬೆಳೆಸಿಕೊಳ್ಳುವ ಮನಸ್ಸುಗಳಿಂದ ದೂರವಿರಲು ಸಾಧ್ಯವಿಲ್ಲವೆಂದು ತಿಳಿಯಬೇಕು.

ಈ ಕೇಂದ್ರ ಗ್ರಂಥಾಲಯದ ರಜತ ಮಹೋತ್ಸವ (1939) ಸಂದರ್ಭದಲ್ಲಿ ಅಂದಿನ ದಿವಾನ್‌ ಸರ್‌ ಮಿರ್ಜಾ ಇಸ್ಮಾಯಿಲ್‌ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಡ್ಡಾಯ ಶಿಕ್ಷಣ ನೀತಿ ಹಾಗೂ ಪ್ರತಿ ಶಾಲೆಯಲ್ಲೂ ಸುಸಜ್ಜಿತ ಗ್ರಂಥಾಲಯ ಇರಬೇಕಾದುದು ಎಷ್ಟು ಅಗತ್ಯ ಎಂಬುದನ್ನು  ಪ್ರಸ್ತಾಪಿಸಿದ್ದರು. ಅವರ ಮಾತು ಎಷ್ಟು ಪ್ರಸ್ತುತ ಎಂದು ಇಂದು ನಾವು ಯೋಚಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT